ಬಂಟ್ವಾಳ, ಫೆಬ್ರವರಿ 27, 2023 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಹಾಗೂ ರಮಾನಾಥ ರೈ ಅಭಿಮಾನಿ ಬಳಗ ಇದರ ಸಹಯೋಗದಲ್ಲಿ ಭಾನುವಾರ (ಫೆ 26) ರಾತ್ರಿ ಆಲಡ್ಕ ಮೈದಾನದಲ್ಲಿ ನಡೆದ 6 ತಂಡಗಳ ಪಾಣೆಮಂಗಳೂರು ಪ್ರೀಮಿಯರ್ ಲೀಗ್ ವಾಲಿಬಾಲ್ ಲೀಗ್ ಟೂರ್ನಮೆಂಟ್ ಪಿಪಿಎಲ್ ಸೀಸನ್-1 ಕೂಟದ ಪ್ರಶಸ್ತಿಯನ್ನು ಇರ್ಶಾದ್ ಇಚ್ಚ ಮಾಲಕತ್ವದ ಇಚ್ಚ ವಾರಿಯರ್ಸ್ ಗೆದ್ದುಕೊಂಡಿದೆ. ಶಾಹಿದ್ ಮಾಲಕತ್ವದ ಎಸ್ ಎಸ್ ಅಟ್ಯಾಕರ್ಸ್ ರನ್ನರ್ಸ್ ಆಗಿ ಮೂಡಿ ಬಂದಿದೆ.
ಇಚ್ಚ ವಾರಿಯರ್ಸ್ ತಂಡದ ಸಯೀದ್ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡರೆ, ಎಸ್ ಎಸ್ ಅಟ್ಯಾಕರ್ಸ್ ತಂಡದ ಶುಹೈಬ್ ಬೆಸ್ಟ್ ಪಾಸರ್ ಹಾಗೂ ಅಶ್ವರ್ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಪಡೆದುಕೊಂಡರು.
ಉಳಿದಂತೆ ಕೂಟದಲ್ಲಿ ನ್ಯಾಚುರಲ್ ಲವರ್ಸ್, ವೈಟ್ ರೋಸ್, ಝಮೀನ್ ಸ್ಮ್ಯಾಶರ್ಸ್, ಶಬಿ ಅಟ್ಯಾಕರ್ಸ್ ತಂಡಗಳು ಭಾಗವಹಿಸಿತ್ತು. ರಿಯಾಝ್ ಬೊಳ್ಳಾಯಿ, ಮಜೀದ್ ಕೊಪ್ಪಳ, ಸಿದ್ದೀಕ್ ಬಂಗ್ಲೆಗುಡ್ಡೆ ಮೊದಲಾದವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
0 comments:
Post a Comment