ಮಂಗಳೂರು, ಫೆಬ್ರವರಿ 23, 2023 (ಕರಾವಳಿ ಟೈಮ್ಸ್) : ಕಳುವಾದ/ ಕಳೆದು ಹೋದ /ಸುಲಿಗೆಯಾದ ಮೊಬೈಲ್ ಫೋನ್‍ಗಳ ದುರ್ಬಳಕೆ ತಡೆಗಟ್ಟಲು ಅಂತಹ ಮೊಬೈಲ್ ಫೋನ್‍ಗಳನ್ನು ಬ್ಲಾಕ್ ಮಾಡುವ ನೂತನ ವ್ಯವಸ್ಥೆ ಸಿಇಐರ್ ಫೊರ್ಟಲ್ ಅನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದ್ದು, ಈ ಪೊರ್ಟಲ್ ಮೂಲಕ 24 ಗಂಟೆಯಲ್ಲಿ 7 ಕಾಣೆಯಾದ ಮೊಬೈಲ್ ಫೋನ್‍ಗಳನ್ನು ಪತ್ತೆ ಹಚ್ಚಿ ಅವುಗಳಲ್ಲಿ 4 ಮೊಬೈಲ್ ಫೋನ್‍ಗಳನ್ನು ಸೆನ್ ಅಪರಾಧ ಪೊಲೀಸ್ ಠಾಣೆ, ಉಪ್ಪಿನಂಗಡಿ, ಪುತ್ತೂರು ಟೌನ್, ಸುಳ್ಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಮೊಬೈಲ್ ಕಳೆದು ಹೋದರೆ, ಕಳುವಾದರೆ, ಸುಲಿಗೆಯಾದರೆ ತಕ್ಷಣವೇ ಇ-ಲೋಸ್ಟ್ ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ಸ್ವೀಕೃತಿ ಪಡೆದು ನಂತರ ಮಾಹಿತಿಯನ್ನು ಸಿಇಐರ್ ಪೊರ್ಟಲ್ ಮೂಲಕ ನಮೂದಿಸುವುದು. ಇದರಿಂದ ಕಳೆದು ಹೋದ, ಕಳುವಾದ, ಸುಲಿಗೆಯಾದ ಮೊಬೈಲ್ ಫೋನ್‍ಗಳ ದುರ್ಬಳಕೆ ತಡೆಗಟ್ಟಲು ಹಾಗೂ ಅವುಗಳನ್ನು ತಕ್ಷಣ ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ಕೋರಿದ್ದಾರೆ.
0 comments:
Post a Comment