ಬಂಟ್ವಾಳ, ಫೆಬ್ರವರಿ 05, 2023 (ಕರಾವಳಿ ಟೈಮ್ಸ್) : ಬಂಟ್ಟಾಳ ತಾಲೂಕಿನ ಮಾವಿನಕಟ್ಟೆ-ಕೊರಗಟ್ಟೆ-ಪಾಂಗಲ್ಪಾಡಿ ಜಿಲ್ಲಾ ಮುಖ್ಯ ರಸ್ತೆಯ ಮುರದಮೇಲು ಎಂಬಲ್ಲಿಂದ ಗೋಂಜದವರಗೆ ಕಾಂಕ್ರೇಟಿಕರಣ ಮಾಡುವುದೆಂದು ಅಗೆದು ಹಾಕಿ ಹಲವು ದಿನಗಳೇ ಕಳೆದರೂ ಇನ್ನೂ ಕಾಯಕಲ್ಪ ಒದಗಿಸದೆ ಇರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಬಸ್ಸುಗಳು, ಶಾಲಾ ಬಸ್ಸುಗಳು ಸಹಿತ ಸಾರ್ವಜನಿಕ ವಾಹನಗಳು ನಿರಂತರವಾಗಿ ಸಂಚರಿಸುವ ಈ ರಸ್ತೆಯಲ್ಲಿ ಇದೀಗ ಅಗೆದು ಹಾಕಿದ ಪರಿಣಾಮ ರಸ್ತೆ ಸಂಚಾರವೇ ಅಸಾಧ್ಯವಾದಂತಿದೆ. ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಇದೀಗ ರಸ್ತೆ ಅವ್ಯವಸ್ಥೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಇಲ್ಲಿನ ರಸ್ತೆ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸ್ಥಳೀಯ ತುಳುನಾಡ ರಕ್ಷಣಾ ವೇದಿಕೆಯ ಪ್ರಮುಖರು ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿ ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಸಾರ್ವಜನಿಕರ ಸಹಕಾರದಿಂದ ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
0 comments:
Post a Comment