ಬಂಟ್ವಾಳ, ಫೆಬ್ರವರಿ 15, 2023 (ಕರಾವಳಿ ಟೈಮ್ಸ್) : ಮಾಣಿ ಸಂತೆ ಮಾರುಕಟ್ಟೆ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳವಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡೆಶ್ವಾಲ್ಯ ಗ್ರಾಮದ ಪೆರ್ಲಾಪು-ಚಿನ್ನಯ್ಯ ಕಟ್ಟೆ ನಿವಾಸಿ ಮನೀಶ್ ಆಚಾರ್ಯ ಅವರು ಫೆ 13 ರಂದು ಬೆಳಿಗ್ಗೆ 6.30 ಗಂಟೆಗೆ ತನ್ನ ಮೋಟಾರು ಸೈಕಲಿನಲ್ಲಿ ಮನೆಯಿಂದ ಹೊರಟು ಮಾಣಿ ಸಂತೆ ಮಾರುಕಟ್ಟೆ ಬಳಿ ಬೆಳಿಗ್ಗೆ 6:40 ರ ವೇಳೆಗೆ ನಿಲ್ಲಿಸಿ ಮಂಗಳೂರಿಗೆ ಹೋಗಿ ರಾತ್ರಿ 8.30 ರ ವೇಳೆಗೆ ಮರಳಿ ಬಂದು ನೋಡಿದಾಗ ದ್ವಿಚಕ್ರ ವಾಹನ ಕಾಣೆಯಾಗಿದೆ.
ಕಳವಾದ ಮೋಟಾರು ಸೈಕಲ್ ನೋಂದಣಿ ಸಂಖ್ಯೆ ಕೆಎ03 ಎಚ್ ಎಚ್ 8001 ಆಗಿದ್ದು, ಅಂದಾಜು ಮೌಲ್ಯ 30 ಸಾವಿರ ರೂಪಾಯಿ ಎಂದು ಮನೀಶ್ ಆಚಾರ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
0 comments:
Post a Comment