ಬಂಟ್ವಾಳ, ಫೆಬ್ರವರಿ 16, 2023 (ಕರಾವಳಿ ಟೈಮ್ಸ್) : ತಾಯಿ ಮನೆಯಲ್ಲಿದ್ದ ವಿವಾಹಿತೆಗೆ ಸ್ವತಃ ಅಣ್ಣ ಹಾಗೂ ತಮ್ಮನೇ ಸೇರಿ ಹಲ್ಪೆ ನಡೆಸಿದ್ದಲ್ಲದೆ ಅವ್ಯಾಚ್ಯವಾಗಿ ಬೈಯ್ದು ಜೀವ ಬೆದರಿಕೆ ಒಡ್ಡಿದ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಶ್ರೀಮತಿ ಆಯಿಷಾ ಎಚ್ (29) ಅವರು ಮಹಿಳಾ ಪೊಲೀಸ್ ಠಾಣೆಗ ದೂರು ನೀಡಿದ್ದು, ತಾಲೂಕಿನ ಬಿಳಿಯೂರು ಗ್ರಾಮದ ಕರುವೇಲು ಕ್ವಾಟ್ರಸ್ ಎಂಬಲ್ಲಿ ತನ್ನ ತಾಯಿ ಮನೆಯಲ್ಲಿದ್ದ ವೇಳೆ ಫೆ 2 ರಂದು ಅವರ ಅಣ್ಣ ಹಕೀಂ ಹಾಗೂ ತಮ್ಮ ಅಬ್ದುಲ್ ಮಜೀದ್ ಎಂಬವರು, ಗಂಡನಮ ನೆಗೆ ತೆರಳವಂತೆ ಒತ್ತಾಯಪಡಿಸಿ ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುವುದಲ್ಲದೆ, ನೀನು ನಿನ್ನ ಗಂಡನ ಮನೆಗೆ ಹೋಗದೇ ಇದ್ದಲ್ಲಿ ನಿನ್ನನ್ನು ಮುಂದಕ್ಕೆ ಸಾಯಿಸುತ್ತೇವೆ ಹಾಗೂ ನಾವು ಹೊಡೆದಿರುವ ವಿಚಾರವನ್ನು ಹೇಳಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿರುತ್ತಾರೆ ಎಂದು ಆಯಿಷಾ ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
0 comments:
Post a Comment