ಬಂಟ್ವಾಳ, ಫೆಬ್ರವರಿ 23, 2023 (ಕರಾವಳಿ ಟೈಮ್ಸ್) : ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ-75 ರ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಕೆ ಎನ್ ಆರ್ ಕನ್ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಗೆ ಸೇರಿದ ಕಬ್ಬಿಣದ ರಾಡ್ ಗಳನ್ನು ಕಾರಿನಲ್ಲಿ ಕಳವಿಗೆ ಯತ್ನಸಿದ್ದ ವೇಳೆ ಕಂಪೆನಿಯ ಮುಖ್ಯಸ್ಥರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ.
ಈ ಬಗ್ಗೆ ಕಂಪೆನಿಯ ನಂದಕುಮಾರ್ ಆರ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಾಷ್ಟ್ರೀಯ ಹೆದ್ದಾರಿ-75 ಕಾಮಗಾರಿಯನ್ನು ಕಲ್ಲಡ್ಕದಲ್ಲಿ ಮಾಡುತ್ತಿದ್ದು, ಬುಧವಾರ ರಾತ್ರಿ 9 ಗಂಟೆ ವೇಳೆಗೆ ಕಲ್ಲಡ್ಕದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕೆಎ 21 ಎಂ 3721 ನೋಂದಣಿ ಸಂಖ್ಯೆಯ ಗ್ರೇ ಕಲರ್ ಮಾರುತಿ ಆಲ್ಟೋ ಕಾರಿಗೆ ಅಪರಿಚಿತ ಇಬ್ಬರು ವ್ಯಕ್ತಿಗಳು ಕಬ್ಬಿಣದ ರಾಡ್‍ಗಳನ್ನು ತುಂಬುತ್ತಿದ್ದು, ಈ ಸಂದರ್ಭ ನಾನು ಕಾರು ಬಳಿಗೆ ಹೋದಾಗ ಕಾರನ್ನು ಬಿಟ್ಟು ಓಡಿ ಪರಾರಿಯಾಗಿರುತ್ತಾರೆ.
ಕಳ್ಳತನ ಮಾಡಲು ಬಳಸಿದ ಕಾರು ಮತ್ತು ಅದರಲ್ಲಿ ತುಂಬಿಸಿದ ರಾಡ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳತನ ಮಾಡಲು ಪ್ರಯತ್ನಿಸಿದ ರಾಡ್ ಗಳ ಅಂದಾಜು ಮೌಲ್ಯ 5 ಸಾವಿರ ರೂಪಾಯಿ ಅಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment