ಬಂಟ್ವಾಳ, ಫೆಬ್ರವರಿ 13, 2023 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ರೈತ ಕಾರ್ಮಿಕರ ಹೋರಾಟ ಬಂಟ್ವಾಳದಲ್ಲಿ ಪ್ರಭಾವಶಾಲಿಯಾಗಿದ್ದು ದುಡಿಯುವ ವರ್ಗದ ಆಶಾಕಿರಣವಾಗಿ ಮೂಡಿಬಂದಿತ್ತು. ಬಳಿಕ ಭೂ ಸುಧಾರಣೆ ಕಾನೂನಿನ ಜಾರಿಗಾಗಿ ನಡೆದ ಸಮರಶೀಲ ಹೋರಾಟ ಬಂಟ್ವಾಳದಲ್ಲಿ ತನ್ನದೇ ಛಾಪನ್ನು ಮೂಡಿಸಿತು. ವಿವಿಧ ವಿಭಾಗದ ಕಾರ್ಮಿಕರಿಗೆ ನ್ಯಾಯ ಒದಗಿಸುವಲ್ಲಿಯೂ ಕಮ್ಯುನಿಸ್ಟರ ಪಾತ್ರವಿದೆ. ಒಟ್ಟಿನಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ಕೆಂಬಾವುಟದ ಪಾತ್ರವಿದ್ದು, ಅಂತಹ ಕಮ್ಯುನಿಸ್ಟ್ ಚಳುವಳಿಯ ಪರಂಪರೆಯನ್ನು ಮತ್ತೆ ಮರುಕಳಿಸುವಂತಾಗಲು ದುಡಿಯುವ ವರ್ಗದ ಚಟುವಟಿಕೆಗಳು ಬಂಟ್ವಾಳ ತಾಲೂಕಿನಾದ್ಯಂತ ವಿಸ್ತಾರವಾಗಿ ಬೆಳೆಯಬೇಕು. ಅಂತಹ ಚಟುವಟಿಕೆಗಳಿಗೆ ಕೇಂದ್ರ ಸ್ಥಳವಾಗಿ ಸಿಪಿಐಎಂ ಕಚೇರಿ ಕಾರ್ಯನಿರ್ವಹಿಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಅಭಿಪ್ರಾಯಪಟ್ಟರು.
ಬಿ ಸಿ ರೋಡಿನಲ್ಲಿ ನೂತನ ಸಿಪಿಐಎಂ ಬಂಟ್ವಾಳ ತಾಲೂಕು ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಸಮಸ್ತ ಮಾನವ ಕುಲದ ಏಳಿಗೆಗಾಗಿ ಶ್ರಮಿಸುವ ಕಮ್ಯುನಿಸ್ಟ್ ಸಿದ್ಧಾಂತದಿಂದ ಮಾತ್ರವೇ ಶೋಷಿತ ಸಮುದಾಯದ, ದೀನ-ದಲಿತರ ಉದ್ದಾರ ಮಾಡಲು ಸಾಧ್ಯ, ದೇಶದ ಆಳುವ ವರ್ಗ ಕೋಮುವಾದ ಕಾಪೆರ್Çರೇಟ್ ಮಿಶ್ರಣದಿಂದ ದೇಶದ ಸಂಪತ್ತನ್ನು ದೋಚುತ್ತಿದೆ. ಅಂತಹ ವಂಚಕರಿಂದ ದೇಶವನ್ನು ಉಳಿಸಬೇಕಾದರೆ ಕಮ್ಯುನಿಸ್ಟ್ ಚಳುವಳಿಯನ್ನು ವಿಸ್ತಾರವಾಗಿ ಬೆಳೆಸುವ ಅನಿವಾರ್ಯತೆ ಇದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್, ಜಿಲ್ಲಾ ಕಾರ್ಮಿಕ ಮುಖಂಡ ಬಿ ಎಂ ಭಟ್ ಮಾತನಾಡಿದರು. ಪಕ್ಷದ ಹಿರಿಯ ಮುಖಂಡರಾದ ಬಿ ವಾಸು ಗಟ್ಟಿ, ಸಂಜೀವ ಬಂಗೇರ, ಮೋನಪ್ಪ ಸಪಲ್ಯ, ನಾರಾಯಣ ಬಡಕಬೈಲು, ಸುಂದರ ಶೆಟ್ಟಿ ಮೂಡಬಿದ್ರಿ, ಬಂಟ್ವಾಳ ತಾಲೂಕು ಮುಖಂಡರಾದ ಉದಯ ಕುಮಾರ್, ಜನಾರ್ದನ, ಲೋಲಾಕ್ಷಿ, ಚಂದ್ರ ಪೂಜಾರಿ, ಯುವಜನ ಮುಖಂಡರಾದ ಅಮೀರ್, ಅಮನ್, ಕಾರ್ಮಿಕ ಮುಖಂಡರಾದ ವಿಮಲ, ನಾರಾಯಣ ಮೊದಲಾದವರು ಭಾಗವಹಿಸಿದ್ದರು.
ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ, ವಂದಿಸಿದರು.
0 comments:
Post a Comment