ಬೆಳ್ಳಾರೆ, ಫೆಬ್ರವರಿ 22, 2023 (ಕರಾವಳಿ ಟೈಮ್ಸ್) : ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯುಟೋರಿಯಲ್ ನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡಿಕೊಂಡಿರುವ ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ನೆರೆಮನೆ ನಿವಾಸಿ, ಆರೋಪಿ ಅಶ್ರಫ್ @ ಅಚ್ಚಚ್ಚಪ್ಪ ಎಂಬಾತನ ವಿರುದ್ದ ಪೊಕ್ಸೋ ಪ್ರಕರಣ ದಾಖಲಾಗಿದೆ.
ಬಾಲಕಿಯ ಮನೆ ಪಕ್ಕದಲ್ಲೇ ಆರೋಪಿ ತನ್ನ ಹೆಂಡತಿ ಮಕ್ಕಳ ಜೊತೆ ವಾಸವಾಗಿದ್ದು, ಫೆ 10 ರಂದು ಸಂಜೆ 4:30 ರ ವೇಳೆಗೆ ಬಾಲಕಿ ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವಾಗ ಅರೋಪಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಅಶ್ಲೀಲವಾಗಿ ಮಾತನಾಡಿದ್ದು, ನೀನು ರಾತ್ರಿ ಸಮಯ ನಿನ್ನ ತಾಯಿ ಮೊಬೈಲಿನಿಂದ ಕರೆ ಮಾಡಿ ನನ್ನ ಜೊತೆ ಮಾತನಾಡಬೇಕು ಎಂಬುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಬಾಲಕಿಯು ಮನೆಗೆ ಬಂದು ತಾಯಿ ಜೊತೆ ವಿಚಾರ ತಿಳಿಸಿದ್ದಾಳೆ. ನಂತರದ ದಿನಗಳಲ್ಲಿ ಬಾಲಕಿ ಹೆದರಿ ಶಾಲೆಗ ಹೋಗುವುದಿಲ್ಲ ಎಂದು ಹೇಳುತ್ತಿದ್ದಳು.
ಬಳಿಕ ಆರೋಪಿ ಪದೇ ಪದೇ ಕರೆ ಮಾಡಲು ಒತ್ತಾಯಿಸುತ್ತಿದ್ದುದರಿಂದ ಬಾಲಕಿಯ ತಾಯಿ ಫೆ 12 ರಂದು ಭಾನುವಾರ ಮಗಳು ಮನೆಯಲ್ಲಿರುವ ಸಮಯ ಮೊಬೈಲಿನಿಂದ ಅಶ್ರಫ್‍ಗೆ ಕರೆ ಮಾಡಿಸಿದಾಗ ಆತನು ಅಶ್ಲೀಲವಾಗಿ ಮಾತನಾಡಿದ್ದು, ಇದರಿಂದ ಬಾಲಕಿ ಹೆದರಿ ಸುಮಾರು 10 ದಿನಗಳಿಂದ ಶಾಲೆಗೆ ಹೋಗಿರುವುದಿಲ್ಲ. ಈ ಬಗ್ಗೆ ಬಾಲಕಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು, ಕಲಂ 354(ಡಿ), 509 ಐಪಿಸಿ ಮತ್ತು ಕಲಂ 12 ಫೆÇಕ್ಸೋ ಆಕ್ಟ್ 2012 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment