ಬಂಟ್ವಾಳ, ಫೆಬ್ರವರಿ 14, 2023 (ಕರಾವಳಿ ಟೈಮ್ಸ್) : ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ತೋಟ ಮನೆ ನಿವಾಸಿ ಪುಷ್ಪರಾಜ್ ಪೂಜಾರಿ ಅವರ ಮನೆ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ತಂದು ಹಾಕಲಾಗಿದ್ದ ಸೆಂಟ್ರಿಂಗ್ ಶೀಟುಗಳನ್ನು ಕಳ್ಳರು ಕಳವುಗೈದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕಂಟ್ರಾಕ್ಟರ್, ಕೆದಿಲ ಗ್ರಾಮದ ನಿವಾಸಿ ಫಾರೂಕ್ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಫೆ 6 ರಂದು ಸಂಜೆ ವೇಳೆ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ತೋಟ ಮನೆ ನಿವಾಸಿ ಪುಷ್ಪರಾಜ್ ಪೂಜಾರಿ ಅವರ ಬಾಬ್ತು ಮನೆ ಮತ್ತು ಕಮರ್ಷಿಯಲ್ ಬಿಲ್ಡಿಂಗ್ ಕೆಲಸ ನಡೆಯುತ್ತಿದ್ದು, ಸದ್ರಿ ಕೆಲಸಕ್ಕಾಗಿ ಕಬ್ಬಿಣದ ಸೆಂಟ್ರಿಂಗ್ ಶೀಟುಗಳನ್ನು ತಂದು ಹಾಕಲಾಗಿತ್ತು. ಫೆ 7 ರಂದು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಬಂದು ನೋಡಿದಾಗ ಸೆಂಟ್ರಿಂಗ್ ಶೀಟ್ ಇಟ್ಟಿದ್ದ ರಾಶಿಯಿಂದ ಸೆಂಟ್ರಿಂಗ್ ಶೀಟುಗಳು ಕಡಿಮೆಯಾಗಿರುವುದು ಕಂಡು ಬಂದಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ ಸುಮಾರು 89 ಶೀಟುಗಳು ಕಳವಾಗಿದ್ದು ಬೆಳಕಿಗೆ ಬಂದಿದೆ. ಕಳವಾಗಿರುವ ಶೀಟುಗಳ ಒಟ್ಟು ಮೌಲ್ಯ 97,900/- ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
0 comments:
Post a Comment