ಬಂಟ್ವಾಳ, ಫೆಬ್ರವರಿ 24, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಪೊಲೀಸ್ ಉಪವಿಭಾಗದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಸೂಕ್ಷ್ಮ ಹಾಗೂ ಪ್ರಮುಖ ಸ್ಥಳಗಳಲ್ಲಿ ಗುರುವಾರ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ತಾತ್ಕಾಲಿಕ ಚೆಕ್ ಪೊಸ್ಟ್‍ಗಳನ್ನು ಸ್ಥಾಪಿಸಿ ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಿ, 158 ಐಎಂವಿ ಸ್ಥಳ ದಂಡ ಪ್ರಕರಣ, 83 ಕೆಪಿ ಆಕ್ಟ್ ಲಘು ಪ್ರಕರಣ, 94 ಕೋಟ್ಪಾ ಪ್ರಕರಣ, 2 ಡ್ರಂಕ್ ಆಂಡ್ ಡ್ರೈವ್ ಪ್ರಕರಣ, 4 ಅಬಕಾರಿ ಕಾಯ್ದೆ ಪ್ರಕರಣ, 1 ಮಾದಕ ವಸ್ತು ಸೇವನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
107 ಜನರ ಎಂಸಿಸಿಟಿಎನ್‍ಎಸ್ ಸ್ಕ್ಯಾನರ್ ತಪಾಸಣೆ, 49 ಜನ ರೌಡಿ ಶೀಟರ್‍ಗಳ ತಪಾಸಣೆ ನಡೆಸಿದ್ದಾರೆ. 6 ಸಂಶಯಾಸ್ಪದ ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಜೊತೆಗೆ ಯೂಥ್ ಕಮಿಟಿ ಮೀಟಿಂಗ್, ಸಾರ್ವಜನಿಕ ಸಂಪರ್ಕ ಸಭೆಗಳನ್ನು, ಮೊಹಲ್ಲಾ ಸಭೆಗಳನ್ನು ನಡೆಸಿ ಕಾನೂನಿನ ಅರಿವು ಮೂಡಿಸಿದ್ದಾರೆ.
0 comments:
Post a Comment