ಬಂಟ್ವಾಳ, ಫೆಬ್ರವರಿ 15, 2023 (ಕರಾವಳಿ ಟೈಮ್ಸ್) : ಜಾಗದ ತಕರಾರು ಹಾಗೂ ಪಡಿತರ ಅಂಗಡಿ ಮನಸ್ತಾಪ ಕಾರಣಕ್ಕಾಗಿ ಸಂಬಂಧಿಕರಿಬ್ಬರು ಹೊಡೆದಾಡಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬರಿಮಾರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಮದಿಮೆತ್ತಿಮಾರು ನಿವಾಸಿ ಸನತ್ ಕುಮಾರ್ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಫಿರ್ಯಾದಿ ಸಲ್ಲಿಸಿದ್ದು, ಸನತ್ ಕುಮಾರ್ ಹಾಗೂ ಆರೋಪಿ ಪ್ರಶಾಂತ್ ಕುಮಾರ್ ಸಂಬಂಧಿಕರಾಗಿದ್ದು, ಅವರೊಳಗೆ ಜಾಗದ ತಕರಾರು ಇರುವುದಲ್ಲದೇ ಸನತ್ ಕುಮಾರ್ ಅವರಿಗೆ ಬರಿಮಾರು ಪೇಟೆಯಲ್ಲಿರುವ ಖಾಸಗಿ ಪಡಿತರ ಅಂಗಡಿ ಸಂಬಂಧಿತ ವಿಷಯದಲ್ಲೂ ಮನಸ್ತಾಪವಿರುತ್ತದೆ. ಸನತ್ ಕುಮಾರ್ ಫೆ 14 ರಂದು ತನ್ನ ಜೀಪಿನಲ್ಲಿ ಮನೆ ಕಡೆಗೆ ಬರುತ್ತಿದ್ದ ವೇಳೆ ಅಪರಾಹ್ನ ಸುಮಾರು 3.30 ಗಂಟೆಗೆ ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಆರೋಪಿ ಪ್ರಶಾಂತ್ ಕುಮಾರ್ ಆತನ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರಿನಲ್ಲಿ ಬಂದು ಸನತ್ ಕುಮಾರನ ಜೀಪಿಗೆ ಅಡ್ಡ ನಿಲ್ಲಿಸಿ ಕಾರಿಂದ ಇಳಿದು ಏಕಾಏಕಿಯಾಗಿ ಸನತ್ ಕುಮಾರನ ಬಲ ಕೆನ್ನೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುವುದಲ್ಲದೇ ಕಾರಿನಲ್ಲಿದ್ದ ಮರದ ದೊಣ್ಣೆಯನ್ನು ತಲೆಗೆ ಹೊಡೆಯಲು ಮುಂದಾದಾಗ ಎಡ ಕೈಯಿಂದ ತಡೆದ ಪರಿಣಾಮ ಸನತ್ ಕುಮಾರನ ಮೊಣ ಗಂಟಿಗೆ ರಕ್ತ ಗಾಯವಾಗಿರುವುದಲ್ಲದೇ ಬಲ ಕೈ ಯಿಂದ ಮರದ ದೊಣ್ಣೆಯನ್ನು ಹಿಡಿದ ಪರಿಣಾಮ ಬಲ ಹೆಬ್ಬೆರಳು ಮತ್ತು ರಿಸ್ಟಿಗೆ ಊದಿದ ಗಾಯವಾಗಿರುತ್ತದೆ. ಗಾಯಗೊಂಡ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
0 comments:
Post a Comment