ಬಂಟ್ವಾಳ, ಫೆಬ್ರವರಿ 03, 2023 (ಕರಾವಳಿ ಟೈಮ್ಸ್) : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮ ದೇವತೆಗಳ ವರ್ಷಾವಧಿ ಸಾಣದ ಜಾತ್ರೆಯು ಫೆಬ್ರವರಿ 5 ಭಾನುವಾರದಿಂದ 12 ಶನಿವಾರದವರೆಗೆ ನಡೆಯಲಿದೆ.
ಫೆಬ್ರವರಿ 5 ರ ಭಾನುವಾರದಂದು ಮುಂಜಾನೆ ತೋರಣ ಮುಹೂರ್ತ ಹಾಗೂ ಸಂಜೆ ಪ್ರಥಮ ಚೆಂಡು, ದಿನಾಂಕ 9 ರ ಗುರುವಾರದಂದು ಕೊನೆ ಚೆಂಡು, ರಾತ್ರಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ಆಗಮಿಸಿ, ದ್ವಜಾರೋಹಣ ಹಾಗೂ ಕಂಚಿಲು ಸೇವೆ ನಡೆಯಲಿದೆ.
ಫೆ 10 ರ ಶುಕ್ರವಾರದಂದು ಪೂರ್ವಾಹ್ನ ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿ ಪ್ರತಿಷ್ಠೆ, ಸಾಣದಲ್ಲಿ ಮಡಸ್ತಾನ ಸೇವೆ, ನವಕ ಕಲಶಾಭಿಷೇಕ, ಅನ್ನ ಸಂತರ್ಪಣೆ, ಸಂಜೆ 6.30ಕ್ಕೆ ಶ್ರೀ ಉಳ್ಳಾಕ್ಲು ಧರ್ಮ ದೇವತೆಗಳ ನೇಮ ಹಾಗೂ ಬಂಡಿ ಉತ್ಸವ ನಡೆಯಲಿದೆ.
ಫೆಬ್ರವರಿ 11 ರ ಶನಿವಾರದಂದು ಪೂರ್ವಾಹ್ನ ಸಾಣದಲ್ಲಿ ಚಂಡಿಕಾಯಾಗ, ಮಧ್ಯಾಹ್ನ ಪಂಚಾಮೃತ ಅಭಿಷೇಕ, ನಂದಿ ಪೂಜೆ, ಅನ್ನ ಸಂತರ್ಪಣೆ, ಸಂಜೆ ಅರ್ಕುಳ ಬಸದಿಯಲ್ಲಿ ಮಹಾಮಾತೆ ಪದ್ಮಾವತೀ ದೇವಿಗೆ ಪುಷ್ಪಾಲಂಕಾರ ಪೂಜೆ, ಸಂಜೆ 6.30ರಿಂದ ಶ್ರೀ ಮಗೃಂತಾಯಿ ಧರ್ಮ ದೈವದ ನೇಮ, ಬಂಡಿ ಉತ್ಸವಗಳು ಸಂಪನ್ನಗೊಳ್ಳಲಿದೆ. ದಿನಾಂಕ 12ರ ಭಾನುವಾರ ಮುಂಜಾನೆ ಪಿಲಿಚಾಮುಂಡಿ ದೈವದ ನೇಮ ನಡೆದು ದ್ವಜಾವರೋಹಣ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment