ಬಂಟ್ವಾಳ, ಫೆಬ್ರವರಿ 25, 2023 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಹಾಗೂ ರಮಾನಾಥ ರೈ ಅಭಿಮಾ£ಗಳ ಬಳಗ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಸಹಯೋಗದಲ್ಲಿ ಆಹ್ವಾನಿತ 16 ತಂಡಗಳ ನಿಗದಿತ ಓವರ್ ಗಳ “ಕಾಂಗ್ರೆಸ್ ಟ್ರೋಫಿ-2023” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟಕ್ಕೆ ಶನಿವಾರ (ಫೆ 25) ಮೈದಾನದಲ್ಲಿ ಸಂಭ್ರಮದ ಚಾಲನೆ ನೀಡಲಾಯಿತು.
ಬಂಟ್ವಾಳ ಪುರಸಭೆಯ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಜೆಟಿಟಿ, ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಕರೀಂ ಬೊಳ್ಳಾಯಿ, ಭೂಯಾ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ, ಬಂಗ್ಲೆಗುಡ್ಡೆ ಕಾಂಗ್ರೆಸ್ ಬೂತ್ ಅಧ್ಯಕ್ಷ ಅಬ್ದುಲ್ ಖಾದರ್ ಪಿ ಬಿ, ಪ್ರಮುಖರಾದ ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್, ಶಮೀರ್ ನಂದಾವರ, ಮುನ್ನ ನೆಹರುನಗರ, ಹನೀಫ್ ಅಕ್ಕರಂಗಡಿ, ಸತ್ತಾರ್ ಗುಡ್ಡೆಅಂಗಡಿ, ಆರಿಫ್ ಅಕ್ಕರಂಗಡಿ, ಪಿ ಬಿ ಶಾಫಿ ಹಾಜಿ ಆಲಡ್ಕ, ಶಫಿಕ್ ಯು, ರಶೀದ್ ಕತಾರ್, ಹಬೀಬ್ ಆಲಡ್ಕ, ಇರ್ಶಾದ್ ಇಚ್ಚ ಬೋಗೋಡಿ, ಅಶ್ರಫ್ ಯು, ಅಶ್ಫಾಕ್ ಯು, ಜಮಾಲ್ ಬಂಗ್ಲೆಗುಡ್ಡೆ, ಅಝ್ಮಲ್ ಪಿ ಜೆ, ಫಯಾಝ್ ಆಲಡ್ಕ, ನೌಫಲ್ ಯು, ಝುಬೈರ್ ಬಂಗ್ಲೆಗುಡ್ಡೆ, ಆರಿಫ್ ಮೊದಲಾದವರು ಭಾಗವಹಿಸಿದ್ದರು.
ಕ್ರಿಕೆಟ್ ಕೂಟದ ಮೊದಲ ದಿನ ನಡೆದ ಪಂದ್ಯಾವಳಿಯಲ್ಲಿ ಸ್ಕೆಚ್ ನಂದಾವರ, ಎ ಕೆ ಸ್ಟ್ರೈಕರ್ಸ್ ಕೈಕಂಬ, ಯುನೈಟೆಡ್ ಕಲ್ಲಗುಡ್ಡೆ, ಕೋಟೆ ಫ್ರೆಂಡ್ಸ್, ಭೂಯಾ ಆಲಡ್ಕ, ಫ್ರೆಂಡ್ಸ್ ಆಲಡ್ಕ, ಯೂರೋ ಫ್ರೆಂಡ್ಸ್ ಅಡ್ಡೂರು ತಂಡಗಳು ಸೆಣಸಾಟ ನಡೆಸಿದ್ದು, ಭೂಯಾ ಆಲಡ್ಕ ತಂಡ ಪ್ರಥಮ ತಂಡವಾಗಿ ಫೈನಲ್ ಪ್ರವೇಶಿಸಿದೆ.
ರಫೀಕ್ ಮೆಜೆಸ್ಟಿಕ್, ಹಬೀಬ್, ರಶೀದ್ ತೀರ್ಪುಗಾರರಾಗಿ ಮತ್ತು ಸಲಾಲ್ ಗೂಡಿನಬಳಿ ಹಾಗೂ ಸಫಾಝ್ ಗೂಡಿನಬಳಿ ಸ್ಕೋರರ್ ಆಗಿ ಸಕರಿಸಿದರು.
ಫೆಬ್ರವರಿ 26 ರಂದು ಕ್ರಿಕೆಟ್ ಪಂದ್ಯಾಟ ಮುಂದುವರೆಯಲಿದ್ದು ಫೈನಲ್ ಹಂತಕ್ಕೇರುವ ಮತ್ತೊಂದು ತಂಡದ ನಿರ್ಧಾರವಾಗಲಿದೆ. ಅಪರಾಹ್ನ 3 ಗಂಟೆಗೆ ಬೃಹತ್ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಮಾಜಿ ಸಚಿವ ಬಿ ರಮಾನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಮುಂಚೂಣಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು, ಉದ್ಯಮಿಗಳು, ವಿವಿಧ ಕ್ಷೇತ್ರದ ಗಣ್ಯರು, ಕ್ರಿಕೆಟ್ ಪೆÇ್ರೀತ್ಸಾಹಕರು, ಸಂಘಟಕರು ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆಯ ಬಳಿಕ ಲೀಗ್ ಮಾದರಿಯ “ಪಾಣೆಮಂಗಳೂರು ಪ್ರೀಮಿಯರ್ ಲೀಗ್ ಪಿಪಿಎಲ್ ಸೀಸನ್-1” ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಹಾಗೂ ಮಾರ್ಚ್ 5 ಹಾಗೂ 19 ರಂದು ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-7 ನಡೆಯಲಿದೆ.
0 comments:
Post a Comment