ಉಪ್ಪಿನಂಗಡಿ, ಜನವರಿ 01, 2023 (ಕರಾವಳಿ ಟೈಮ್ಸ್) : ಇಲ್ಲಿನ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಶಿರಾಡಿ ಎಂಬಲ್ಲಿ ಡಿ 31 ರಂದು ಶನಿವಾರ ಸಂಜೆ ತೋಟದ ಕೆಲಸ ಮಾಡಿ ಹೊರಡುವ ಸಂದರ್ಭ ತೋಟದ ಪಂಪು ಶೆಡ್ಡಿನ ಸ್ವಿಚ್ ಆನ್ ಮಾಡುವ ವೇಳೆ ಅಲ್ಲೇ ಇದ್ದ ಕಾಡಾನೆ ದಾಳಿ ಮಾಡಿದ ಪರಿಣಾಮ ತಂದೆ ತಿಮ್ಮಪ್ಪ ಮೃತಪಟ್ಟಿದ್ದು, ಅವರ ಪುತ್ರ ಶಾರೂನ್ ಕುಮಾರ್ ಗಾಯಗೊಂಡಿದ್ದಾರೆ.
ಈ ಬಗ್ಗೆ ಶಿರಾಡಿ ಗ್ರಾಮದ ಜನತಾ ಕಾಲೊನಿ ನಿವಾಸಿ ಪದ್ಮನಾಭ ಎಂಬವರ ಪುತ್ರ ಜಯಾನಂದ ಪಿ ಅವರು ಉಪ್ಪಿನಂಗಡಿ ಠಾಣೆಗೆ ಫಿರ್ಯಾದಿ ಸಲ್ಲಿಸಿದ್ದು, ನಾನು ಹಾಗೂ ನನ್ನ ಮಾವ ತಿಮ್ಮಪ್ಪ ಮತ್ತು ಅವರ ಮಗ ಶಾರೂನ್ ಕುಮಾರ್ ಡಿ 31 ರಂದು ಶನಿವಾರ ಕಡಬ ತಾಲೂಕು ಶಿರಾಡಿ ಎಂಬಲ್ಲಿರುವ ರಾಜೇಶ್ ಕೆ ಎ ಅವರ ತೋಟದ ಕೆಲಸಕ್ಕೆ ಹೋದವರು ಕೆಲಸ ಮುಗಿಸಿ ಅವರ ಮನೆಯಲ್ಲಿ ಸಂಜೆ ಉಪಾಹಾರ ಸೇವಿಸಿ ಹೊರಡುತ್ತಿರುವಾಗ ಸಮಯ ಸುಮಾರು 6:45 ಗಂಟೆಗೆ ರಾಜೇಶ್ ಕೆ ಎ ಅವರು ನೀವು ಹೋಗುವಾಗ ಪಂಪು ಶೆಡ್ಡಿನಲ್ಲಿ ಪಂಪಿನ ಸ್ವಿಚ್ ಆನ್ ಮಾಡಿ ಹೋಗಿ ಎಂದು ತಿಳಿಸಿದ ಹಿನ್ನಲೆಯಲ್ಲಿ ತೋಟದ ಸಮೀಪ ಇರುವ ಪಂಪು ಶೆಡ್ಡಿನ ಬಳಿ ಹೋದಾಗ ಪಂಪು ಶೆಡ್ ಹಿಂಬದಿ ಇದ್ದ ಕಾಡಾನೆ ಗಮನಕ್ಕೆ ಬಾರದೆ ಇದ್ದು, ತಿಮ್ಮಪ್ಪ ಅವರು ಪಂಪಿನ ಸ್ವಿಚ್ ಆನ್ ಮಾಡಲು ಹೋದಾಗ ಕಾಡಾನೆಯು ತಿಮ್ಮಪ್ಪರವರ ಮೇಲೆ ದಾಳಿ ಮಾಡಿದೆ. ತಕ್ಷಣ ಪುತ್ರ ಶರೂನ್ ಕುಮಾರ ತಂದೆ ತಿಮ್ಮಪ್ಪರನ್ನು ರಕ್ಷಿಸಲೆಂದು ಅವರ ಬಳಿ ಹೋದಾಗ ಆತನ ಮೇಲೂ ಕಾಡಾನೆ ತಿವಿದು ಗಾಯಗೊಳಿಸಿದೆ.
ಇದನ್ನು ನೋಡಿದ ನಾನು ಹೆದರಿ ಸ್ಥಳದಿಂದ ಬೊಬ್ಬೆ ಹಾಕುತ್ತಾ ಓಡಿ ರಾಜೇಶ್ ಕೆ ಎ ಅವರ ಮನೆಗೆ ಹೋಗಿ ವಿಚಾರ ತಿಳಿಸಿ ಅಲ್ಲಿದ್ದವರೊಂದಿಗೆ ಘಟನಾ ಸ್ಥಳಕ್ಕೆ ಬಂದು ನೋಡಿದಾಗ ತಿಮ್ಮಪ್ಪ ಮತ್ತು ಶರೂನ್ ಕುಮಾರ್ ಅವರು ಗಾಯಗೊಂಡು ಬಿದ್ದಿದ್ದರು. ಅವರನ್ನು ಎಬ್ಬಿಸಿ ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್‍ನಲ್ಲಿ ನೆಲ್ಯಾಡಿ ಆಶ್ವಿನಿ ಆಸ್ಪತ್ರೆಗೆ ಸಾಗಿಸಿದಾದ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಹಿನ್ನಲೆಯಲ್ಲಿ ಗಾಯಾಳುಗಳಿಬ್ಬರನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ತಿಮ್ಮಪ್ಪ ಅವರು ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಶರೂನ್ ಕುಮಾರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 01/2023 ಕಲಂ 174 ಸಿಆರ್‍ಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment