ಉಪ್ಪಿನಂಗಡಿ, ಜನವರಿ 20, 2023 (ಕರಾವಳಿ ಟೈಮ್ಸ್) : ಸಹೋದರರನ್ನು ಕಾರಿನಲ್ಲಿ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಗಾಂಧಿಪಾರ್ಕ್ ಎಂಬಲ್ಲಿ ಗುರುವಾರ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕಡಬ ತಾಲೂಕು, ಕೊಯಿಲ ಗ್ರಾಮ ಮತ್ತು ಅಂಚೆ ವ್ಯಾಪ್ತಿಯ ಜನತಾ ಕಾಲೊನಿ, ಕೆ ಸಿ ಫಾರ್ಮ್ ಬಳಿಯ ನಿವಾಸಿ ಅಬ್ದುಲ್ ರಫೀಕ್ ಎಂಬವರ ಪುತ್ರ ನಿಜಾಮುದ್ದೀನ್ (26) ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಫಿರ್ಯಾದಿ ಸಲ್ಲಿಸಿದ್ದು, ಗುರುವಾರ (ಜ 19) ಬೆಳಗ್ಗೆ ನಿಝಾಮುದ್ದೀನ್ ಅವರು ಇಳಂತಿಲ ಜೋಗಿಬೆಟ್ಟು ಎಂಬಲ್ಲಿಗೆ ಕೆಲಸಕ್ಕೆಂದು ಉಪ್ಪಿನಂಗಡಿಗೆ ಬಂದಾಗ ಸುಮಾರು 10.45 ರ ವೇಳೆಗೆ ಪರಿಚಯದ ಸಿದ್ದೀಕ್ ಜೆಸಿಬಿ ಕರುವೇಲು ಎಂಬಾತ ಫೆÇೀನ್ ಮಾಡಿ “ಕೆಲಸವಿದೆ, ನೀನು ಗಾಂಧಿ ಪಾರ್ಕಿಗೆ ಬಾ ಎಂದಾಗ ನಿಝಾಮುದ್ದೀನ್ ಉಪ್ಪಿನಂಗಡಿ ಗಾಂಧಿ ಪಾರ್ಕಿಗೆ ಹೋಗಿದ್ದು, ಅಲ್ಲಿ ಪರಿಚಯದ ಅನ್ಸಾರ್ ಕೆಮ್ಮಾರ ಎಂಬಾತನ ಆಲ್ಟೋ ಕಾರಿನಲ್ಲಿ ಸಿದ್ದೀಕ್ ಜೆಸಿಬಿ ಕರುವೇಲು, ಇರ್ಷಾದ್ ಮಠ ಮತ್ತು ಶಾಫಿ ಗಡಿಯಾರ ಎಂಬವರು ಇದ್ದು. ಪೆರ್ನೆ ಕಡೆ ಕೆಲಸಕ್ಕೆ ಹೋಗುವ ಎಂದು ಹೇಳಿ ನಿಜಾಮುದ್ದೀನನ್ನು ಕಾರಿನಲ್ಲಿ ಕುಳ್ಳಿರಿಸಿ ಅನ್ಸಾರ್ ಕೆಮ್ಮಾರ ಕಾರು ಚಲಾಯಿಸುತ್ತಾ ಬಂಟ್ವಾಳ ಕಡೆಗೆ ಹೋಗುತ್ತಿರುವಾಗ ದಾರಿ ಮಧ್ಯೆ ಪರಿಚಯವಿಲ್ಲದ ವ್ಯಕ್ತಿಯೊಬ್ಬ ಸ್ಕೂಟರನಲ್ಲಿ ಬಂದು ಕಾರಿಗೆ ಹತ್ತಿ ಕಾರಿನಲ್ಲಿದ್ದ ಶಾಪಿ ಗಡಿಯಾರ ಕಾರಿನಿಂದ ಇಳಿದು ಹಿಂದಿನಿಂದ ಸ್ಕೂಟರಿನಲ್ಲಿ ಬರುತ್ತಿದ್ದನು. ಬಳಿಕ ಕಾರಿನಲ್ಲಿ ಮಲ್ಲೂರು ಎಂಬಲ್ಲಿಗೆ ಹೋಗಿ ಅಲ್ಲಿದ್ದ ಮನೆಯೊಂದರ ಎದುರು ಕಾರನ್ನು ನಿಲ್ಲಿಸಿ ಆ ಮನೆಗೆ ನಿಜಾಮುದ್ದೀನನ್ನು ಕರೆದುಕೊಂಡು ಹೋದಾಗ ಅಲ್ಲಿ ಪರಿಚಯವಿಲ್ಲದ ಕೆಲವು ಜನರಿದ್ದು ಸಿದ್ದೀಕ್ ಮತ್ತು ಇತರರು ವಿದೇಶದಿಂದ ಬಂದ ನಿನ್ನ ತಮ್ಮ ಶಾರೂಕ್ ಎಲ್ಲಿದ್ದಾನೆ? ಎಂದು ಕೇಳಿ ಅಲ್ಲಿದ್ದವರ ಪೈಕಿ ಒಬ್ಬನು ದೊಣ್ಣೆಯಿಂದ ನಿಜಾಮುದ್ದೀನನ ಬಲ ಕೈಗೆ ಹಾಗೂ ಎಡ ಕಾಲಿಗೆ ಹೊಡೆದು ಮತ್ತೊಬ್ಬನು ಕಾಲಿಗೆ ತುಳಿದು ಸಿದ್ದೀಕ್ ಜೆಸಿಬಿ ಕರುವೇಲು ಮತ್ತು ಇರ್ಷಾದ್ ಮಠ ಅವರು ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಡಿದು ಗೋಡೆಗೆ ಒರಗಿಸಿ ವಿದೇಶದಿಂದ ಬಂದ ನಿನ್ನ ತಮ್ಮ ಶಾರೂಕ್ ಎಲ್ಲಿ ಎಂದು ಕೇಳಿ ಹಲ್ಲೆ ನಡೆಸಿರುತ್ತಾರೆ. ನಂತರ ನಿಜಾಮುದ್ದೀನನ ಮೊಬೈಲ್ ಫೆÇೀನ್ ತೆಗೆದು ತಮ್ಮ ಶಾರೂಕ್ ನಿಗೆ ಫೆÇೀನ್ ಮಾಡಿ ಕಡಂಬು ಎಂಬಲ್ಲಿಗೆ ಬರ ಹೇಳಿ ನಿಜಾಮುದ್ದೀನನ್ನು ಕಾರಿನಲ್ಲಿ ಕರೆದುಕೊಂಡು ಕಡಂಬು ಎಂಬಲ್ಲಿಗೆ ಬಂದು ಅಲ್ಲಿಗೆ ಬಂದಿದ್ದ ಆತನ ತಮ್ಮ ಶಾರೂಕ್ ಮತ್ತು ಜೊತೆಯಲ್ಲಿದ್ದ ಫೈಝಲ್ ಎಂಬವನನ್ನು ಕಾರಿನಲ್ಲಿ ಕುಳ್ಳಿರಿಸಿ ವಾಪಾಸು ಮಲ್ಲೂರಿಗೆ ಕರೆದುಕೊಂಡು ಹೋಗಿ ಅದೇ ಮನೆಯಲ್ಲಿ ನಿಜಾಮುದ್ದೀನ್ ಮತ್ತು ತಮ್ಮ ಶಾರೂಕ್ ನಿಗೆ ಹಲ್ಲೆ ನಡೆಸಿರುತ್ತಾರೆ.
ಬಳಿಕ ಶಾರೂಕ್ ನನ್ನು ಅಲ್ಲಿಯೇ ಇರಿಸಿಕೊಂಡು ನಿಜಾಮುದ್ದೀನನ್ನು ನೀನು ಮನೆಗೆ ಹೋಗಿ 4 ಲಕ್ಷ ರೂಪಾಯಿ ಹಣ ತರಬೇಕೆಂದು ತಿಳಿಸಿ ನೀನು ಹಣ ತರುವವರೆಗೆ ನಿನ್ನ ತಮ್ಮನನ್ನು ಬಿಡುವುದಿಲ್ಲ ಎಂದು ಹೇಳಿ, ನಿಜಾಮುದ್ದೀನನ ಮೊಬೈಲ್ ಫೆÇೀನನ್ನು ಅವರೇ ಇರಿಸಿಕೊಂಡು ಅನ್ಸಾರ್ ಕೆಮ್ಮಾರ ಎಂಬವನ ಕಾರಿನಲ್ಲಿ ನಿಜಾಮುದ್ದೀನ್ ಹಾಗೂ ಫೈಝಲ್ ನನ್ನು ರಾತ್ರಿ 8.30 ಗಂಟೆಗೆ ಕಳುಹಿಸಿಕೊಟ್ಟಿರುತ್ತಾರೆ. ಅದರಂತೆ ರಾತ್ರಿ 9.30 ಗಂಟೆಗೆ ಮನೆಗೆ ತಲುಪಿದ ನಿಜಾಮುದ್ದೀನ್ ನಡೆದ ವಿಚಾರವನ್ನು ಅವರ ತಾಯಿ ಸಫಿಯಾರವರಲ್ಲಿ ತಿಳಿಸಿ ಆರೋಪಿತರು ನಡೆಸಿದ ಹಲ್ಲೆಯಿಂದ ಉಂಟಾದ ನೋವಿನ ಬಗ್ಗೆ ಚಿಕಿತ್ಸೆಗೆ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆರೋಪಿಗಳು ಹಣ ಸುಲಿಗೆ ಮಾಡಬೇಕೆಂಬ ಉದ್ದೇಶದಿಂದಲೇ ಈ ಅಪಹರಣ ಹಾಗೂ ಹಲ್ಲೆ ಕೃತ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ.
ಆರೋಪಿಗಳು ಹಣಕ್ಕಾಗಿ ಒತ್ತೆ ಇರಿಸಿಕೊಂಡಿರುವ ಶಾರೂಕನ ಇರುವಿಕೆಯ ಬಗ್ಗೆ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 07/2023 ಕಲಂ 323, 324, 364 (ಎ) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment