ಮಂಗಳೂರು, ಜನವರಿ 22, 2023 (ಕರಾವಳಿ ಟೈಮ್ಸ್) : ಶ್ರೀರಾಮ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಮಂಗಳೂರು ಪ್ರಾದೇಶಿಕ ವಿಭಾಗದ ವತಿಯಿಂದ ವ್ಯಾಪ್ತಿಯ ಆಯ್ದ ಅರ್ಹ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಜನವರಿ 24 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸುರತ್ಕಲ್-ಹೊಸಬೆಟ್ಟುವಿನ ಶ್ರೀರಾಮ್ ಅಟೋ ಮಾಲ್ ಯಾರ್ಡ್‍ನಲ್ಲಿ ನಡೆಯಲಿದೆ.
ಕಂಪೆನಿಯ ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ವಿದ್ಯಾರ್ಥಿ ನಿಧಿ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ರೈ ಎಸ್ಟೇಟ್ ಮಾಲಕ ಅಶೋಕ್ ರೈ ಕೋಡಿಂಬಾಡಿ, ಶ್ರೀರಾಮ್ ಅಟೋ ಮಾಲ್ ಝಡ್ ಬಿ ಎಚ್ ಗಣೇಶ್ ಭಟ್, ಮಾತಾ ಡೆವಲಪರ್ಸ್ ಪ್ರೈ ಲಿ ಇದರ ಎಂ ಡಿ ಸಂತೋಷ್ ಕುಮಾರ್ ಶೆಟ್ಟಿ, ಉದ್ಯಮಿ ಅಶ್ವಿನ್ ಬಿ ಆಳ್ವ ಕಿನ್ನಿಗೋಳಿ, ಶ್ರೀ ಕಟೀಲ್ ಲಾಜಿಸ್ಟಿಕ್ ಮಾಲಕ ಜನಾರ್ದನ ಪೂಜಾರಿ ಭಾಗವಹಿಸುವರು.
ಸಂಸ್ಥೆಯ ಝೋನಲ್ ರಿಕವರಿ ಹೆಡ್ ನಾಗರಾಜ ಬಿ, ಸ್ಟೇಟ್ ಹೆಡ್ ಸದಾಶಿವ, ಶ್ರೀರಾಮ್ ಅಟೋ ಮಾಲ್ ಸ್ಟೇಟ್ ಹೆಡ್ ಪ್ರಶಾಂತ್ ಶೆಟ್ಟಿ ಮೊದಲಾದವರು ಗೌರವ ಉಪಸ್ಥಿತರಿರುವರು ಎಂದು ಸಂಸ್ಥೆಯ ಮಂಗಳೂರು ಪ್ರಾದೇಶಿಕ ವಿಭಾಗದ ಪ್ರಕಟಣೆ ತಿಳಿಸಿದೆ.
0 comments:
Post a Comment