ಬಂಟ್ವಾಳ, ಜನವರಿ 09, 2023 (ಕರಾವಳಿ ಟೈಮ್ಸ್) : ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಬಂಟ್ವಾಳ ಶಾಖಾ ವತಿಯಿಂದ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಜನವರಿ 12 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಬಿ ಸಿ ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಲಿದೆ.
ಕಂಪೆನಿಯ ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ವಿದ್ಯಾರ್ಥಿ ನಿಧಿ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಹಿರಿಯ ಸಾಹಿತಿ ನೇಮು ಪೂಜಾರಿ, ನಿವೃತ್ತ ಅಧ್ಯಾಪಕ ನಾರಾಯಣ ನಾಯ್ಕ, ಪೊಲೀಸ್ ಅಧಿಕಾರಿ ಪರಮೇಶ್ವರ, ನ್ಯಾಯವಾದಿಗಳಾದ ಪ್ರಸಾದ್ ಕುಮಾರ್ ರೈ, ಉಮೇಶ್ ಕುಮಾರ್ ವೈ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ಯ, ಸಂಸ್ಥೆಯ ಝೋನಲ್ ರಿಕವರಿ ಹೆಡ್ ನಾಗರಾಜ ಬಿ, ಸ್ಟೇಟ್ ಹೆಡ್ ಸದಾಶಿವ, ರೀಜನಲ್ ಬಿಝಿನೆಸ್ ಹೆಡ್ ಚೇತನ್ ಅರಸ್, ರೀಜನಲ್ ಕಲೆಕ್ಷನ್ ಹೆಡ್ ಪ್ರಮೋದ್ ಅಂಚನ್, ಬಂಟ್ವಾಳ ಕಾಂಚನಾ ಹೋಂಡಾ ಮ್ಯಾನೇಜರ್ ರಕ್ಷಿತ್ ಮೊದಲಾದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 89 ಮಂದಿ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 3,500/- ರಂತೆ 3.11 ಲಕ್ಷ ರೂಪಾಯಿ ಹಾಗೂ 152 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂಪಾಯಿಯಂತೆ 4.56 ಲಕ್ಷ ರೂಪಾಯಿ ಸೇರಿ ಒಟ್ಟು 241 ಮಂದಿ ವಿದ್ಯಾರ್ಥಿಗಳಿಗೆ 7.67 ಲಕ್ಷ ರೂಪಾಯಿ ವಿದ್ಯಾರ್ಥಿ ನಿಧಿ ವಿತರಿಸಲಾಗುವುದು ಎಂದು ಸಂಸ್ಥೆಯ ಬಿ ಸಿ ರೋಡು ಶಾಖಾಧಿಕಾರಿ ಪುನೀತ್ ಕುಮಾರ್, ಶಾಖಾ ರಿಕವರಿ ಹೆಡ್ ಲತೀಶ್ ಶೆಟ್ಟಿ ಎನ್ ಹಾಗೂ ಶಾಖಾ ಕಲೆಕ್ಷನ್ ಹೆಡ್ ಪದ್ಮನಾಭ ನಾಯ್ಕ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment