ಬಂಟ್ವಾಳ, ಜನವರಿ 04, 2023 (ಕರಾವಳಿ ಟೈಮ್ಸ್) : ಮ್ಯಾನ್ ಆಂಡ್ ಮೋಡಾ ಇದರ ಆಶ್ರಯದಲ್ಲಿ “ರೋಯಲ್ ಲೀನ್ ಟ್ರೋಫಿ-2023” ಆಹ್ವಾನಿತ 8 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಜನವರಿ 8 ರಂದು ಪಾಣೆಮಂಗಳೂರು ಶಾರದಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯಾಟಗಳು ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ವಿಜೇತ ತಂಡಕ್ಕೆ 25 ಸಾವಿರ ನಗದು ಹಾಗೂ ರೋಯಲ್ ಲೀನ್ ಟ್ರೋಫಿ ಮತ್ತು ರನ್ನರ್ಸ್ ತಂಡಕ್ಕೆ 15 ಸಾವಿರ ನಗದು ಹಾಗೂ ರೋಯಲ್ ಲೀನ್ ಟ್ರೋಫಿ ನೀಡಲಾಗುವುದು. ಅಲ್ಲದೆ ಉತ್ತಮ ಪ್ರದರ್ಶನಕ್ಕಾಗಿ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಕೂಟದಲ್ಲಿ ಹಾರ್ಡಿ ಗೈಸ್, ರೋಯಲ್ ಕಿಂಗ್ಸ್, ಯುನೈಟೆಡ್ ಜಾಗ್ವಾರ್, ಬಂಟ್ವಾಳ ಫ್ರೆಂಡ್ಸ್, ರೈಸಿಂಗ್ ಇಲೆವೆನ್, ಹೋಝ್ ವಾರಿಯರ್ಸ್, ಟೀಂ10 ಹಾಗೂ ಝಹರಾನ್ ಬಾಯ್ಸ್ ತಂಡಗಳು ಸೆಣಸಾಟ ನಡೆಸಲಿದೆ ಎಂದು ಕೂಟದ ಆಯೋಜಕರಾದ ಸರ್ಫರಾಝ್ ಹಾಗೂ ರಿಯಾಝ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment