ಉಡುಪಿ, ಜನವರಿ 30, 2023 (ಕರಾವಳಿ ಟೈಮ್ಸ್) : ಜಿಲ್ಲೆಯ ಕಟಪಾಡಿ-ಮಣಿಪುರದ ರಹ್ಮಾನಿಯಾ ಜುಮಾ ಮಸೀದಿ ಅಧೀನದ ಖಲಂದರ್ ಷಾ ದಫ್ ಸಮಿತಿ ಆಶ್ರಯದಲ್ಲಿ ಫೆಬ್ರವರಿ 2 ರಿಂದ 4 ರವರೆಗೆ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳಾದ ಬುರ್‍ದಾ ಮಜ್ಲಿಸ್, ಜಲಾಲಿಯಾ ದಿಕ್ಸ್, ತಾಜುಲ್ ಉಲಮಾ, ನೂರುಲ್ ಉಲಮಾ, ಪೋಸೋಟು ತಂಙಳ್, ಬೇಕಲ್ ಉಸ್ತಾದ್ ಅನುಸ್ಮರಣಾ ಮಜ್ಲಿಸ್ ಹಾಗೂ ಐತಿಹಾಸಿಕ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮಗಳು ಇಲ್ಲಿನ ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಫೆ 2 ರಂದು ಸಯ್ಯಿದ್ ತ್ವಾಹಾ ತಂಙಳ್ ಪೊಕೊಟೂರು ನೇತೃತ್ವದಲ್ಲಿ ಶಾಹಿನ್ ಬಾಬು ನೇತೃತ್ವದ ತಂಡದಿಂದ ಬುರ್‍ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಫೆ 3 ರಂದು ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯಾ ದಿಕ್ಸ್, ತಾಜುಲ್ ಉಲಮಾ, ನೂರುಲ್ ಉಲಮಾ, ಪೋಸೋಟು ತಂಙಳ್, ಬೇಕಲ್ ಉಸ್ತಾದ್ ಅನುಸ್ಮರಣಾ ಮಜ್ಲಿಸ್ ನಡೆಯಲಿದೆ. ಫೆ 4 ರಂದು ಐತಿಹಾಸಿಕ ಹಾಗೂ ವಿಭಿನ್ನ ಶೈಲಿಯಲ್ಲಿ 12 ಪ್ರಶಸ್ತಿಗಳನ್ನು ಒಳಗೊಂಡ ದಫ್ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ.
ಮಣಿಪುರ ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಝುಬೈರ್ ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಖತೀಬ್ ಅಹ್ಮದುಲ್ ಕಬೀರ್ ಅಮ್ಜದಿ ಉದ್ಘಾಟಿಸುವರು. ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಉಬೈದುಲ್ಲಾ ಸಖಾಫಿ ಅಲ್-ಮುಈನಿ, ಸಫ್ವಾನ್ ಸಅದಿ ಅಲ್-ಮಳ್‍ಹರಿ, ಮುಹಮ್ಮದ್ ಅಶ್ರಫ್ ಮುಸ್ಲಿಯಾರ್, ಇರ್ಶಾದ್ ಸಅದಿ, ಕಾಪು, ಹಾಜಿ ಬಶೀರ್ ಮದನಿ, ಹಂಝ ಮುಸ್ಲಿಯಾರ್, ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಅಬ್ದುಲ್ ಶಮೀರ್ ಮಣಿಪುರ, ಇಸ್ಮಾಯಿಲ್ ಶೇಖ್ ಅಹ್ಮದ್, ಅಬ್ದುಲ್ ಹಮೀದ್ ಕಲ್ಮಂಜ, ಅಬ್ದುಲ್ ರಶೀದ್ ಅಬ್ಬಾಸ್, ಕೆ ರಫೀಕ್ ಶಹಬಾನ್, ರಶೀದ್ ಅಝೀಝ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಣಿಪುರ ರಹ್ಮಾನಿಯಾ ಜುಮಾ ಮಸೀದಿ ಹಾಗೂ ಖಲಂದರ್ ಷಾ ದಫ್ ಸಮಿತಿ ಪ್ರಕಟಣೆ ತಿಳಿಸಿದೆ.
0 comments:
Post a Comment