ಬಂಟ್ವಾಳ, ಜನವರಿ 08, 2023 (ಕರಾವಳಿ ಟೈಮ್ಸ್) : ಮ್ಯಾನ್ ಆಂಡ್ ಮೋಡಾ ಇದರ ಆಶ್ರಯದಲ್ಲಿ ಭಾನುವಾರ (ಜನವರಿ 8) ಪಾಣೆಮಂಗಳೂರು ಶಾರದಾ ಪ್ರೌಢಶಾಲಾ ಮೈದಾನದಲ್ಲಿ ನಡೆದ ನಿಗದಿತ ಓವರ್ ಆಹ್ವಾನಿತ 8 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ರೋಯಲ್ ಲೀನ್ ಟ್ರೋಫಿಯನ್ನು ಮಂಗಳಪೇಟೆ ರೋಯಲ್ ಕಿಂಗ್ಸ್ ತಂಡ ಗೆದ್ದುಕೊಂಡಿದೆ. ಹೋಝ್ ವಾರಿಯರ್ಸ್ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.
ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಳ್ವ, ನ್ಯಾಯವಾದಿ ಉಮೇಶ್ ಕುಮಾರ್ ವೈ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ, ಮಂಗಳೂರು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಹೀಂ ಎನ್ ಬಿ, ವಿದ್ಯಾರ್ಥಿ ಪ್ರಮುಖ ಮುಹಮ್ಮದ್ ಹಿಶಾಂ ಮೊದಲಾದವರು ಭಾಗವಹಿಸಿದ್ದರು.
ಸಮಾರೋಪದಲ್ಲಿ ಭಾಗವಹಿಸಿದ್ದ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಜೆಟಿಟಿ, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಕೆಪಿಸಿಸಿ ಸಂಯೋಜಕ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಕಳ್ಳಿಗೆ ಗ್ರಾ ಪಂ ಸದಸ್ಯ ಮಧುಸೂಧನ್ ಶೆಣೈ, ಸಜಿಪಮುನ್ನೂರು ಗ್ರಾ ಪಂ ಮಾಜಿ ಸದಸ್ಯ ಮುಸ್ತಫಾ ಮುಖ್ತಾರ್ ನಂದಾವರ, ಜೈ ಭಾರತ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಸಲೀಂ ನಂದಾವರ, ನಿಸಾರ್ ಅಕ್ಕರಂಗಡಿ, ರಿಝ್ವಾನ್ ಪಿ ಜೆ ಅಕ್ಕರಂಗಡಿ ಮೊದಲಾದವರು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.
ಕ್ರಿಕೆಟ್ ಕೂಟದ ಆಯೋಜಕರಾದ ರಿಯಾಝ್ ನೆಹರುನಗರ ಸ್ವಾಗತಿಸಿ, ಸರ್ಫರಾಝ್ ವಂದಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಹಾಫಿಲ್, ಸಿಕಂದರ, ರಫೀಕ್ ಮೆಜೆಸ್ಟಿಕ್, ರಿಯಾಝ್ ಎಸ್ ಆರ್ ಬೇಕರ್ಸ್ ಟ್ರೀಟ್ ಅವರು ತೀರ್ಪುಗಾರರಾಗಿ ಸಹಕರಿಸಿದರು. ಸಮದ್ ಕಾಟಿಪಳ್ಳ ಹಾಗೂ ಕಬೀರ್ ಕುದ್ರೋಳಿ ವೀಕ್ಷಕ ವಿವರಣೆ ನೀಡಿದರು. ಸಲ್ಮಾನ್ ಫಾರಿಶ್ ನಂದಾವರ ಅಂಕಪಟ್ಟಿ ನಿರ್ವಹಿಸಿದರು.
ಕೂಟದಲ್ಲಿ ಹಾರ್ಡಿ ಗೈಸ್, ಯುನೈಟೆಡ್ ಜಾಗ್ವಾರ್, ಬಂಟ್ವಾಳ ಫ್ರೆಂಡ್ಸ್, ರೈಸಿಂಗ್ ಇಲೆವೆನ್, ಟೀಂ10 ಹಾಗೂ ಝಹರಾನ್ ಬಾಯ್ಸ್ ತಂಡಗಳು ಸೆಣಸಾಟ ನಡೆಸಿತ್ತು.
ಆರಂಭದಲ್ಲಿ ನಡೆದ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ಪೊಲೀಸ್ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಬಂಟ್ವಾಳ ನಗರ ಠಾಣಾ ತಂಡ ಜಯಗಳಿಸಿತು.
0 comments:
Post a Comment