ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ವಿರುದ್ದ ಪಟ್ಟಭದ್ರರ ಅಪಪ್ರಚಾರದ ಹಿಂದೆ ಹಿಡನ್ ಅಜೆಂಡಾ : ಪದ್ಮಶೇಖರ ಜೈನ್ ಆಕ್ರೋಶ - Karavali Times ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ವಿರುದ್ದ ಪಟ್ಟಭದ್ರರ ಅಪಪ್ರಚಾರದ ಹಿಂದೆ ಹಿಡನ್ ಅಜೆಂಡಾ : ಪದ್ಮಶೇಖರ ಜೈನ್ ಆಕ್ರೋಶ - Karavali Times

728x90

7 January 2023

ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ವಿರುದ್ದ ಪಟ್ಟಭದ್ರರ ಅಪಪ್ರಚಾರದ ಹಿಂದೆ ಹಿಡನ್ ಅಜೆಂಡಾ : ಪದ್ಮಶೇಖರ ಜೈನ್ ಆಕ್ರೋಶ

ಬಂಟ್ವಾಳ, ಜನವರಿ 08, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಮೂಡೂರು ಹಾಗೂ ದೇವಶ್ಯಮೂಡೂರು ಗ್ರಾಮಗಳ ಜನರ ಆರ್ಥಿಕ ಆಶೋತ್ತರಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿರುವ ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ವಿರುದ್ದ ಪಟ್ಟಭದ್ರ ಹಿತಾಸಕ್ತಿಗಳು ಹಿಡನ್ ಅಜೆಂಡಾ ಇಟ್ಟುಕೊಂಡು ಅಪಪ್ರಚಾರದಲ್ಲಿ ತೊಡಗಿದ್ದು, ಇದು ಫಲ ನೀಡದು ಎಂದು ಬ್ಯಾಂಕ್ ಅಧ್ಯಕ್ಷ ಬಿ ಪದ್ಮಶೇಖರ್ ಜೈನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಪತ್ರಿಕೆ ಜೊತೆ ಮಾತನಾಡಿದ ಅವರು, ಸುಮಾರು 1.20 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕಿನ ಪಾರದರ್ಶಕತೆ ಬಗ್ಗೆ ಗ್ರಾಮದ ಜನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಕೆಲವೊಂದು ಹಿಡನ್ ಹಾಗೂ ರಾಜಕೀಯ ಪ್ರೇರಿತ ಉದ್ದೇಶಗಳನ್ನಿಟ್ಟುಕೊಂಡು ನಿರಂತರ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಪಟ್ಟಭದ್ರರು ತಮ್ಮ ಸ್ವಾರ್ಥ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ. 


ಬ್ಯಾಂಕಿನಲ್ಲಿ 14.34 ಕೋಟಿ ಠೇವಣಾತಿ ಇದ್ದು, ಡಿಸಿಸಿ ಬ್ಯಾಂಕಿನಿಂದ ಪಡೆದ ಸಾಲ 9.19 ಕೋಟಿಯಷ್ಟಿದೆ. ಹೂಡಿಕೆಗಳಲ್ಲಿ (ಶೇರು ಹಾಗೂ ಠೇವಣಾತಿ ಸೇರಿ) 4.16 ಕೋಟಿಯಷ್ಟಿದ್ದು, ಸದಸ್ಯರಿಗೆ ನೀಡಿದ ಸಾಲಗಳು 20.57 ಕೋಟಿಯಷ್ಟಿದೆ. ಈ ಪ್ರಮಾಣದ ದಾಖಲೆ ಮಟ್ಟದ ಅಭಿವೃದ್ದಿ ಸಾಧಿಸಿರುವ ಬ್ಯಾಂಕಿನ ಬೆಳವಣಿಗೆ ಹಿಂದೆ ಆಡಳಿತ ಮಂಡಳಿ ಶ್ರಮ ಸಾಕಷ್ಟಿದೆ. ಹೀಗಿರುತ್ತಾ ತೀರಾ ಇತ್ತೀಚೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೆಲವೊಂದು ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ವೈಯುಕ್ತಿಕ ಸೇಡಿಗಾಗಿ ಗ್ರಾಮದ ಜನರ ಆರ್ಥಿಕ ಭಂಡಾರವಾಗಿರುವ, ಜನರ ಆರ್ಥಿಕ ಬೇಕು-ಬೇಡಗಳಿಗೆ ಸ್ಪಂದಿಸುವ ಬ್ಯಾಂಕಿನ ಹಾಗೂ ಆಡಳಿತ ಮಂಡಳಿಯ ವಿರುದ್ದ ಕತ್ತಿ ಮಸೆಯುತ್ತಿರುವ ಕೃತ್ಯಗಳು ನಡೆಯುತ್ತಿದೆ. ಆದರೆ ಸದ್ರಿ ಬ್ಯಾಂಕಿನ ಕಾರ್ಯಚಟುವಟಿಕೆ ಹಾಗೂ ಆಡಳಿತ ಮಂಡಳಿಯ ಪಾರದರ್ಶಕತೆ ಬಗ್ಗೆ ಚೆನ್ನಾಗಿ ಅರಿತುಕೊಂಡಿರುವ ಗ್ರಾಮದ ಜನ ಮಾತ್ರ ಇವರ ಹಿಡನ್ ಅಜೆಂಡಾಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಮಂಗಳಾರತಿ ಮಾಡುತ್ತಾರೆ ಎಂದು ಪದ್ಮಶೇಖರ್ ಜೈನ್ ತಿಳಿಸಿದ್ದಾರೆ. ಈ ಹಿಂದಿನ ದಿನಗಳಲ್ಲಿ ಒಂದು ವಿಷಯವಾಗಿ ಅಪಪ್ರಚಾರದಲ್ಲಿ ತೊಡಗಿ ಅದರಲ್ಲಿ ಕೈಸುಟ್ಟುಕೊಂಡ ಬಳಿಕ ಪಟ್ಟಭದ್ರರು ಮತ್ತೆ ಇನ್ನೊಂದು ವಿಚಾರವಾಗಿ ರಂಗಕ್ಕಿಳಿದಿದ್ದು, ವೈಯುಕ್ತಿಕ, ರಾಜಕೀಯ ಹಾಗೂ ಸೇಡಿಗಾಗಿ ಮೈ ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಪದ್ಮಶೇಖರ್ ಕಿಡಿಕಾರಿದ್ದಾರೆ. 

ಗ್ರಾಮದ ಜನ ಹಾಗೂ ಸಂಘದ ಸದಸ್ಯರು, ಗ್ರಾಹಕರು ಯಾವುದೇ ಸ್ಥಾಪಿತ ಹಿತಾಸಕ್ತಿಗಳ ಅಪಪ್ರಚಾರಕ್ಕೆ ಬಲಿಯಾಗದೆ, ಯಾವುದೇ ಹಿಡನ್ ಅಜೆಂಡಾ ಇಟ್ಟುಕೊಂಡು ಅಪಪ್ರಚಾರ ನಡೆಸುವವರ ಅಪಪ್ರಚಾರಗಳಿಗೆ ಕಿವಿಕೊಡದೆ ಸಹಕಾರಿ ಬ್ಯಾಂಕಿನ ಅಭಿವೃದ್ದಿಗೆ ಹಿಂದಿಗಿಂತ ಹೆಚ್ಚಾಗಿ ಸಹಕರಿಸಿ ಕೈಜೋಡಿಸುವಂತೆ ಪದ್ಮಶೇಖರ್ ಜೈನ್ ಕೋರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ವಿರುದ್ದ ಪಟ್ಟಭದ್ರರ ಅಪಪ್ರಚಾರದ ಹಿಂದೆ ಹಿಡನ್ ಅಜೆಂಡಾ : ಪದ್ಮಶೇಖರ ಜೈನ್ ಆಕ್ರೋಶ Rating: 5 Reviewed By: karavali Times
Scroll to Top