ಬಂಟ್ವಾಳ, ಜನವರಿ 07, 2023 (ಕರಾವಳಿ ಟೈಮ್ಸ್) : ಬೋಳಿಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಶನಿವಾರ ಸ್ವಚ್ಛತಾ ಅರಿವಿನ ಜಾಥಾ ಶಾಲಾ ಆಸುಪಾಸಿನ ಪರಿಸರದಲ್ಲಿ ನಡೆಯಿತು.
ಶಾಲಾ ಶಿಕ್ಷಕಿ ಗಾಯತ್ರಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಈ ಸ್ವಚ್ಛತಾ ಅರಿವಿನ ಜಾಥಾ ಕೈಗೊಂಡಿದ್ದು, ರ್ಯಾಲಿ ಸಾಗುವ ಮೂಲಕ ಶಾಲಾ ವಠಾರದ ಬಳಿಯ ಮನೆ ಹಾಗೂ ಅಂಗಡಿಗಳಿಗೆ ತೆರಳಿ ವಿದ್ಯಾರ್ಥಿಗಳು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಹಸಿ ಕಸ ಹಾಗೂ ಒಣ ಕಸದ ಬಗ್ಗೆ ಅರಿವು ಮೂಡಿಸಿದ ವಿದ್ಯಾರ್ಥಿಗಳು ಕಸ ನಿರ್ವಹಣೆಯ ಬಗ್ಗೆ ಹಾಗೂ ಅವುಗಳನ್ನು ಬೇರ್ಪಡಿಸುವ ಬಗ್ಗೆ ಮಾಹಿತಿ ನೀಡಿದರು. ರ್ಯಾಲಿಯಲ್ಲಿ ಶಾಲಾ ಅಕ್ಷರ ದಾಸೋಹ ಸಿಬ್ಬಂದಿಗಳು ಭಾಗವಹಿಸಿದ್ದರು.
0 comments:
Post a Comment