ಬಂಟ್ವಾಳ, ಜನವರಿ 18, 2023 (ಕರಾವಳಿ ಟೈಮ್ಸ್) : ಚಿಕ್ಕಮಗಳೂರು ಜಿಲ್ಲಾ ಹಬ್ಬದ ಅಂಗವಾಗಿ ನಡೆದ ಕ್ರೀಡಾ ಉತ್ಸವದಲ್ಲಿ ಟ್ವೆಕಾಂಡೋ ಕ್ರೀಡೆಯ ರಾಜ್ಯ ಮಟ್ಟದ ಸ್ಪರ್ಧೆಯ ಹಿರಿಯ ವಿಭಾಗದ 60 ಕೆಜಿ ವಿಭಾಗದಲ್ಲಿ ಪಿ ಎ ಕಾಲೇಜು ಡಿಪ್ಲೊಮಾ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಸಜ್ಜಾದ್ ಅಹ್ಮದ್ ಅವರು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿರುತ್ತಾರೆ.
ಇವರು ಪಾಣೆಮಂಗಳೂರು ಸಮೀಪದ ಬೋಗೋಡಿ ನಿವಾಸಿ ಉಮ್ಮರ್ ಫಾರೂಕ್-ಮುಮ್ತಾಝ್ ದಂಪತಿಯ ಪುತ್ರನಾಗಿರುತ್ತಾರೆ.
0 comments:
Post a Comment