ರಾಹುಲ್ ಗಾಂಧಿಯವರ ಭಾರತ್ ಜೋಡೋ ಜನತೆಯ ಹೃದಯವನ್ನು ಜೋಡಿಸುವ ಯಶಸ್ವಿ ಕಾರ್ಯಕ್ರಮ : ರಮಾನಾಥ ರೈ ಬಣ್ಣನೆ - Karavali Times ರಾಹುಲ್ ಗಾಂಧಿಯವರ ಭಾರತ್ ಜೋಡೋ ಜನತೆಯ ಹೃದಯವನ್ನು ಜೋಡಿಸುವ ಯಶಸ್ವಿ ಕಾರ್ಯಕ್ರಮ : ರಮಾನಾಥ ರೈ ಬಣ್ಣನೆ - Karavali Times

728x90

30 January 2023

ರಾಹುಲ್ ಗಾಂಧಿಯವರ ಭಾರತ್ ಜೋಡೋ ಜನತೆಯ ಹೃದಯವನ್ನು ಜೋಡಿಸುವ ಯಶಸ್ವಿ ಕಾರ್ಯಕ್ರಮ : ರಮಾನಾಥ ರೈ ಬಣ್ಣನೆ

ಬಂಟ್ವಾಳ, ಜನವರಿ 30, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇಶದ ಯುವನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೊ ಸಮಾರೋಪ ಸಮಾರಂಭ ಕಾರ್ಯಕ್ರಮದ  ಪ್ರಯುಕ್ತ ರಾಷ್ಟ್ರ ಧ್ವಜರೋಹಣ ಕಾರ್ಯಕ್ರಮವು ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ನಡೆಯಿತು. 


ಈ ಸಂದರ್ಭ  ಮಾತನಾಡಿದ ರಮಾನಾಥ ರೈ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3790 ಕಿ ಮೀ ಪಾದಯಾತ್ರೆಯ ಮುಖಾಂತರ ಕ್ರಮಿಸಿ ಜಾತಿ-ಜಾತಿಯ ಮಧ್ಯೆ, ಧರ್ಮ ಧರ್ಮದ ಮಧ್ಯೆ ಪ್ರೀತಿಯ ಹೃದಯವನ್ನು ಜೋಡಿಸುವ ಹಾಗೂ ಭಾರತವನ್ನು ಬಲಿಷ್ಠಗೊಳಿಸುವÀಲ್ಲಿ ಭಾರತ್ ಜೋಡೊ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು. ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯರುಗಳಾದ ವಾಸು ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಗಂಗಾಧರ ಪೂಜಾರಿ, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮ ಮೊರಾಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ ಶೆಣೈ, ಜಗದೀಶ್ ಕೊೈಲ, ಪ್ರಮುಖರಾದ ಮಹಾಬಲ ಬಂಗೇರ, ಜಗನ್ನಾಥ ತುಂಬೆ, ಉಮೇಶ್ ಕುಲಾಲ್, ರಿಯಾಝ್ ಹುಸೈನ್ ಬಂಟ್ವಾಳ, ನಿತ್ಯಾನಂದ ಕಲಾಯಿ, ಅಮ್ಮು ಅರ್ಭಿಗುಡ್ಡೆ, ನಾರಾಯಣ ನೇರಂಬೋಳ್, ಮನೋಹರ್ ನೇರಂಬೊಳ್, ಜಯಕರ ಶೆಟ್ಟಿ, ಮಹಮ್ಮದ್ ಸಂಗಬೆಟ್ಟು, ವೆಂಕಪ್ಪ ಪೂಜಾರಿ, ದಿನೇಶ್ ಶೆಟ್ಟಿಗಾರ್, ಆಶೋಕ್ ಆಚಾರ್ಯ, ವಸಂತಿ ಚಂದಪ್ಪ, ವಲಾರ್ ಬಡ್ಡಕಟ್ಟೆ, ಅಬ್ದುಲ್ ರಹೀಮಾನ್, ಚಂದ್ರಶೇಖರ್ ಆಚಾರ್ಯ, ಪದ್ಮನಾಭ ಸಾವಂತ್, ರಿಚರ್ಡ್ ಮಿನೇಜಸ್, ಸಂಜೀವ ಚೆಂಡ್ತಿಮಾರ್ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ರಾಹುಲ್ ಗಾಂಧಿಯವರ ಭಾರತ್ ಜೋಡೋ ಜನತೆಯ ಹೃದಯವನ್ನು ಜೋಡಿಸುವ ಯಶಸ್ವಿ ಕಾರ್ಯಕ್ರಮ : ರಮಾನಾಥ ರೈ ಬಣ್ಣನೆ Rating: 5 Reviewed By: karavali Times
Scroll to Top