ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಅವಿನಾಶ್ |
ಬಂಟ್ವಾಳ, ಜನವರಿ 22, 2023 (ಕರಾವಳಿ ಟೈಮ್ಸ್) : ಬಂಟ್ವಾಳ ನಗರ ಪೊಲೀಸ್ ಠಾಣೆಯ ಜಡತ್ವಕ್ಕೆ ಕಾರಣವಾಗಿದ್ದ ಪಿಎಸ್ಸೈ ಅವರನ್ನು ವರ್ಗಾವಣೆಗೊಳಿಸುವಂತೆ ಇಲ್ಲಿನ ಜನ ಸಾಮಾನ್ಯರ ಬಹುಕಾಲದ ಬೇಡಿಕೆಗೆ ಕೊನೆಗೂ ಸರಕಾರ ಅಸ್ತು ಎಂದಿದ್ದು, ಇಲ್ಲಿನ ನಗರ ಠಾಣಾ ಪಿಎಸ್ಸೈ ಅವಿನಾಶ್ ಗೌಡ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ಅವರನ್ನು ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣಾಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿದ್ದ ಅವಿನಾಶ್ ಅವರನ್ನು ಬಂಟ್ವಾಳ ನಗರ ಠಾಣೆಗೆ ಪಿಎಸೈ ಆಗಿ ನಿಯುಕ್ತಿಗೊಳಿಸಲಾಗಿತ್ತು. ಅವಿನಾಶ್ ಗೌಡ ಅವರು ನಗರ ಠಾಣೆಗೆ ಎಸ್ಸೈ ಆಗಿ ಬಂದ ಬಳಿಕ ಬಂಟ್ವಾಳದಲ್ಲಿ ಪೊಲೀಸ್ ಠಾಣೆಗಳ ಕೆಲವೇ ಅಂತರದಲ್ಲಿ ರೌಡಿಸಂ ಹಾಗೂ ಗಾಂಜಾ ವ್ಯಸ£ಗಳ ಮೇಲಾಟ ಮೇರೆ ಮೀರಿತ್ತು. ಪರಿಣಾಮವಾಗಿ ಸುರೇಂದ್ರ ಬಂಟ್ವಾಳ, ಚೆನ್ನ ಫಾರೂಕ್, ಶಾಂತಿಅಂಗಡಿ ಆಸಿಫ್ ಅವರ ಕೊಲೆ ನಡೆದಿತ್ತು. ಠಾಣಾ ವ್ಯಾಪ್ತಿಯಲ್ಲಿ ಕೆಲವೊಂದು ಅಪರಾಧ ಕೃತ್ಯಗಳು ಎಗ್ಗಿಲ್ಲದೆ ಸಾಗಿತ್ತದಲ್ಲದೆ ಪೊಲೀಸ್ ಬ್ರೋಕರ್ ಗಳ ಮಧ್ಯಸ್ಥಿಕೆಗಳೂ ಮೇಳೈಸಿತ್ತು. ಬಡ ಸಾರ್ವಜನಿಕರು ತಮಗಾದ ಅನ್ಯಾಯದ ಬಗ್ಗೆ ದೂರು ನೀಡಲು ಠಾಣೆಗೆ ಬಂದರೂ ದೂರು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿದ್ದ ಅಧಿಕಾರಿ ಪೊಲೀಸ್ ಬ್ರೋಕರ್ ಗಿರಿಗೆ ಮಾತ್ರ ಮಣೆ ಹಾಕುತ್ತಿದ್ದರು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದರು.
ತೀರಾ ಜಡಕಟ್ಟಿ ಹೋಗಿದ್ದ ಬಂಟ್ವಾಳ ನಗರ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಹಂತಕ್ಕೆ ಮೇಲ್ದರ್ಜೆಗೇರಿ ದಕ್ಷ ಹಾಗೂ ಜನಸ್ನೇಹಿ ಪೊಲೀಸ್ ಅಧಿಕಾರಿ ವಿವೇಕಾನಂದ ಅವರು ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ನಿಯುಕ್ತಿಗೊಂಡ ಬಳಿಕ ಸಾಕಷ್ಟು ಸುಧಾರಣೆ ಕಂಡಿತ್ತು. ಈ ಹಿಂದೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಪಿಎಸ್ಸೈ ಆಗಿ ಸರ್ಕಲ್ ಇನ್ಸ್ ಪೆಕ್ಟರ್ ನಂಜುಂಡೇಗೌಡ ಅವರ ಜೊತೆ ಕಾರ್ಯನಿರ್ವಹಿಸಿ ಶಾಂತಿಯ ಬಂಟ್ವಾಳವಾಗಿ ಪರಿವರ್ತಿಸುವುದರ ಜೊತೆಗೆ ಜನಸ್ನೇಹಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಖ್ಯಾತಿ ಪಡೆದಿರುವ ವಿವೇಕಾನಂದ ಅವರು ಈ ಬಾರಿಯೂ ಖಡಕ್ ಹಾಗೂ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ ಪರಿಣಾಮ ಬಂಟ್ವಾಳದಲ್ಲಿ ಅಪರಾಧ ಪ್ರಮಾಣದಲ್ಲಿ ಭಾರೀ ನಿಯಂತ್ರಣ ಕಂಡು ಬಂದಿದೆ.
ಇದೀಗ ಬಂಟ್ವಾಳ ನಗರ ಠಾಣೆಗೆ ನೂತನ ಪಿಎಸ್ಸೈ ಆಗಿ ಪ್ರೊಬೆಷನರಿಯಾಗಿ ಬಂಟ್ವಾಳದಲ್ಲೇ ಕಾರ್ಯನಿರ್ವಹಿಸುತ್ತಿದ್ದ ರಾಮಕೃಷ್ಣ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಪಿಎಸ್ಸೈ ನಂದಕುಮಾರ್ |
ಇದೇ ವೇಳೆ ಈ ಹಿಂದೆ ಬಂಟ್ವಾಳದಲ್ಲಿ ಪಿಎಸ್ಸೈ ಆಗಿ ದಕ್ಷ ಹಾಗೂ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ್ದ ಬೆಳ್ತಂಗಡಿ ಠಾಣಾ ಪಿಎಸ್ಸೈ ನಂದಕುಮಾರ್ ಅವರನ್ನು ಇದೀಗ ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
0 comments:
Post a Comment