ಎಸ್ಸೆಸ್ಸೆಲ್ಸಿ ಅಂತಿಮ ವೇಳಾಪಟ್ಟಿ ಪ್ರಕಟ, ಮಾರ್ಚ್ 31 ರಿಂದ ಎಪ್ರಿಲ್ 15ರವರೆಗೆ ಪರೀಕ್ಷೆ : ಪರೀಕ್ಷಾ ಮಂಡಳಿಯಿಂದ ದಿನಾಂಕ ಪ್ರಕಟ - Karavali Times ಎಸ್ಸೆಸ್ಸೆಲ್ಸಿ ಅಂತಿಮ ವೇಳಾಪಟ್ಟಿ ಪ್ರಕಟ, ಮಾರ್ಚ್ 31 ರಿಂದ ಎಪ್ರಿಲ್ 15ರವರೆಗೆ ಪರೀಕ್ಷೆ : ಪರೀಕ್ಷಾ ಮಂಡಳಿಯಿಂದ ದಿನಾಂಕ ಪ್ರಕಟ - Karavali Times

728x90

5 December 2022

ಎಸ್ಸೆಸ್ಸೆಲ್ಸಿ ಅಂತಿಮ ವೇಳಾಪಟ್ಟಿ ಪ್ರಕಟ, ಮಾರ್ಚ್ 31 ರಿಂದ ಎಪ್ರಿಲ್ 15ರವರೆಗೆ ಪರೀಕ್ಷೆ : ಪರೀಕ್ಷಾ ಮಂಡಳಿಯಿಂದ ದಿನಾಂಕ ಪ್ರಕಟ

ಬೆಂಗಳೂರು, ಡಿಸೆಂಬರ್ 05, 2022 (ಕರಾವಳಿ ಟೈಮ್ಸ್) : ಪ್ರಸಕ್ತ ವರ್ಷದ ಅಂದರೆ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್ ಆಂಡ್ ಎಸ್ಸೆಸ್ಮೆಂಟ್ ಬೋರ್ಡ್) ಸೋಮವಾರ ಪ್ರಕಟಿಸಿದ್ದು, 2023 ರ ಮಾರ್ಚ್ 31 ರಿಂದ ಎಪ್ರಿಲ್ 15 ರವರೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ. 



ಮಾರ್ಚ್ 31 ರಂದು ಪ್ರಥಮ ಭಾಷೆ ಕನ್ನಡ/ ತೆಲುಗು/ ಹಿಂದಿ/ ಮರಾಠಿ, ಎಪ್ರಿಲ್ 4 ರಂದು ಗಣಿತ, ಸಮಾಜ ಶಾಸ್ತ್ರ, ಎಪ್ರಿಲ್ 6 ರಂದು ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ, ಎಪ್ರಿಲ್ 8 ರಂದು ಅರ್ಥಶಾಸ್ತ್ರ, ಎಪ್ರಿಲ್ 10 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಎಪ್ರಿಲ್ 12 ರಂದು ತೃತೀಯ ಭಾಷೆ ಹಿಂದಿ/ ಕನ್ನಡ/ ಇಂಗ್ಲಿಷ್, ಎಪ್ರಿಲ್ 15 ರಂದು ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಬೋರ್ಡ್ ಪ್ರಕಟಣೆ ತಿಳಿಸಿದೆ. 

ಕಳೆದ ವಾರವಷ್ಟೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪಿಯು ಮಂಡಳಿ ಪ್ರಕಟಿಸಿದ್ದು, 2023ರ ಮಾರ್ಚ್ 9 ರಿಂದ 29ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಿಸಿದ್ದನ್ನು ಈ ಸಂದರ್ಭ ಸ್ಮರಿಸಬಹುದು.

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಅಂತಿಮ ವೇಳಾಪಟ್ಟಿ ಪ್ರಕಟ, ಮಾರ್ಚ್ 31 ರಿಂದ ಎಪ್ರಿಲ್ 15ರವರೆಗೆ ಪರೀಕ್ಷೆ : ಪರೀಕ್ಷಾ ಮಂಡಳಿಯಿಂದ ದಿನಾಂಕ ಪ್ರಕಟ Rating: 5 Reviewed By: karavali Times
Scroll to Top