ಸುಳ್ಯ, ಡಿಸೆಂಬರ್ 08, 2022 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಬಿ ಸಿ ರೋಡು-ಕೈಕಂಬ ನಿವಾಸಿ ಉಬೈದುಲ್ಲ ಎಂಬವರ ಪುತ್ರ, ಬಿಕಾಂ ವಿದ್ಯಾರ್ಥಿ ಮೊಹಮ್ಮದ್ ಇಂತಿಯಾಝ್ (20) ಅವರು ಬುಧವಾರ ತನ್ನ ಸ್ನ್ಯಾಪ್ ಚಾಟ್ ಫ್ರೆಂಡ್ ಅಲ್ಫಾ (18) ಎಂಬವರೊಂದಿಗೆ ಸುಳ್ಯ ಸಂತೋಷ್ ಫಿಲಂ ಥಿಯೇಟರಿನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಲು ತೆರಳಿದ್ದ ವೇಳೆ ಯುವಕರ ತಂಡವೊಂದು ಧಾವಿಸಿ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ಇಂತಿಯಾಝ್ ಈ ಬಗ್ಗೆ ಗುರುವಾರ ಸುಳ್ಯ ಠಾಣೆಗೆ ಇ-ಮೇಲ್ ಮುಖಾಂತರ ದೂರು ನೀಡಿದ್ದು, ಇಂತಿಯಾಝ್ ಬಿಕಾಂ ವ್ಯಾಸಂಗ ಮಾಡಿಕೊಂಡಿದ್ದು, ಸ್ನ್ಯಾಪ್ ಚಾಟ್ ಆಪ್ ಮುಖಾಂತರ ಪರಿಚಯವಾಗಿರುವ ಅಲ್ಪಾ (18) ಅವರ ಜೊತೆ ಬುಧವಾರ (ಡಿ 7) ಬೆಳಿಗ್ಗೆ 9.30 ಗಂಟೆಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ಬಂದು ಸುಳ್ಯ ತಾಲೂಕಿ, ಸುಳ್ಯ ಕಸಬಾ ಗ್ರಾಮದ ನಾವೂರ ಎಂಬಲ್ಲಿರುವ ಸಂತೋಷ್ ಫಿಲಂ ಥಿಯೇಟರಿನಲ್ಲಿ ಕಾಂತಾರ ಸಿನಿಮಾ ನೋಡಲು ಮಾತನಾಡಿಕೊಂಡು ಬೆಳಿಗ್ಗೆ ಸಮಯ ಸುಮಾರು 10.20 ಗಂಟೆಗೆ ಥಿಯೇಟರ್ ಬಳಿ ಹೋದಾಗ ಫಿಲಂ ಥಿಯೇಟರ್‍ನಲ್ಲಿದ್ದವರು ಸಿನಿಮಾ ಆರಂಭವಾಗುವುದು 11 ಗಂಟೆಗೆ ಎಂದು ತಿಳಿಸಿದ ಹಿನ್ನಲೆಯಲ್ಲಿ ಇಬ್ಬರೂ ಕೂಡಾ ಥಿಯೇಟರ್ ಬದಿಯಲ್ಲಿದ್ದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಂತು ಮಾತನಾಡುತ್ತಿರುವಾಗ ಸುಮಾರು 5-10 ಜನರ ಗುಂಪು ಅಲ್ಲಿಗೆ ಬಂದು ಪ್ರಶ್ನಿಸಿದ್ದಾರೆ. ಈ ಪೈಕಿ ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬೀರ್ ಜಟ್ಟಿಪಳ್ಳ, ಸಿದ್ದಿಕ್ ಬೋರುಗುಡ್ಡೆ ಎಂಬವರು ಇಬ್ಬರನ್ನು ಅಕ್ರಮವಾಗಿ ತಡೆದು ನೀವು ಇಲ್ಲಿ ಯಾಕೇ ನಿಂತಿರುವುದು ಬೇವಾರ್ಸಿಗಳೇ ಎಂದು ಅವಾಚ್ಯ ಶಬ್ದಗಳಿಂದ ಬೈದಾಗ ಫಿಲಂ ಸ್ಟಾರ್ಟ್ ಆಗುವುದು 11 ಗಂಟೆಗೆ ಎಂದು ಥಿಯೇಟರ್ ನವರು ಹೇಳಿದಕ್ಕೆ ಇಲ್ಲಿ ಬಂದು ನಿಂತು ಮಾತನಾಡುತ್ತಿದ್ದೇವೆ. ಅಷ್ಟಕ್ಕೂ ಇದನ್ನು ಕೇಳಲು ನೀವು ಯಾರು ಎಂದು ಕೇಳಿದಾಗ 5 ಜನ ಸೇರಿ ಇಂತಿಯಾಝನ ಕೆನ್ನೆಗೆ ಬೆನ್ನಿಗೆ ಕೈಯಿಂದ ಹೊಡೆದು ಇನ್ನು ಮುಂದಕ್ಕೆ ಇಲ್ಲಿಗೆ ಬಂದರೆ ನಿಮ್ಮನ್ನು ಕೊಂದು ಬಿಡುತ್ತೇವೆಂದು ಜೀವ ಬೆದರಿಕೆ ಒಡ್ಡಿರುತ್ತಾರೆ. ಅಷ್ಟರಲ್ಲಾಗಲೇ ಫಿಲಂ ಥಿಯೇಟರಿನಲ್ಲಿದ್ದವರು ಸ್ಥಳಕ್ಕೆ ಬಂದು ಹೊಡೆಯದಂತೆ ತಡೆದ್ದಿದ್ದು, ಬಳಿಕ ಇಬ್ಬರು ಅಲ್ಲಿಂದ ತೆರಳಿದ್ದಾರೆ.
ಈ ಬಗ್ಗೆ ಇಂತಿಯಾಝ್ ಮನೆಯವರಿಗೆ ತಿಳಿಸಿ ಹಾಗೂ ಮನೆಯವರೊಂದಿಗೆ ಚರ್ಚಿಸಿ ಗುರುವಾರ ತಡವಾಗಿ ಈ ದೂರನ್ನು ಇ-ಮೇಲ್ ಮುಖಾಂತರ ನೀಡಿದ್ದು, ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿ ಕೈಯಿಂದ ಹಲ್ಲೆ ಮಾಡಿದವರ ಹೆಸರುಗಳನ್ನು ಅವರು ಮಾತನಾಡುವಾಗ ತಿಳಿದುಕೊಂಡಿದ್ದು, ಹಲ್ಲೆಕೋರರ ವಿರುದ್ದ ಕ್ರಮ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 147/22 ಕಲಂ 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment