ಪುತ್ತೂರು, ಡಿಸೆಂಬರ್ 06, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಬಳಿಯ ನ್ಯೂಲೈಫ್ ಫಿಲಾಶಿಪ್ ಚರ್ಚ್ ಬಳಿಯ ಸೈಟಿನಲ್ಲಿ ಡಿ 1 ರಂದು ಗಾರೆ ಕೆಲಸ ಮಾಡಿಕೊಂಡಿದ್ದ ವೇಳೆ ಸಹೋದರ ಮಹಾದೇವ ಎಂಬವನಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದ ಆರೋಪಿ ನಿಂಗಪ್ಪ ಗೌಡನನ್ನು ಕೊನೆಗೂ ಹಾವೇರಿಯಲ್ಲಿ ಬಂಧಿಸಿ ಕರೆತರುವಲ್ಲಿ ಪುತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 1 ರಂದು ಸಾಯಂಕಾಲ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಬಳಿ ನ್ಯೂ ಲೈಫ್ ಫಿಲಾಶಿಪ್ ಚರ್ಚ್ ಹತ್ತಿರದ ಸೈಟಿನಲ್ಲಿ ಗಾರೆ ಕೆಲಸ ಮಾಡುವ ನಿಂಗಪ್ಪ ಗೌಡ ಮತ್ತು ಮಹಾದೇವ ಎಂಬ ಸಹೋದರ ನಡುವೆ ಕ್ಷುಲ್ಲಕ್ಕ ಕಾರಣಕ್ಕೆ ಗಲಾಟೆ ಪ್ರಾರಂಭಗೊಂಡು ಬಳಿಕ ಅದು ತಾರಕಕ್ಕೇರಿ ನಿಂಗಪ್ಪ ಎಂಬುವನು ಮಹಾದೇವನಿಗೆ ಕಬ್ಬಿಣದ ರಾಡಿನಿಂದ ತಲೆಗೆ ಮತ್ತು ಮೈಗೆ ಬಲವಾಗಿ ಹೊಡೆದು ಹಲ್ಲೆಗೊಳಿಸಿ, ಅಲ್ಲಿಂದ ನಿಂಗಪ್ಪ ಗೌಡನು ಓಡಿ ಹೋಗಿರುತ್ತಾನೆ. ಗಾಯಗೊಂಡ ಮಹದೇವನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವದಾಗಿ ಖಚಿತಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅಪರಾಧ ಕ್ರಮಾಂಕ 97/ 2022 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಾಣಿ, ಅಡಿಶನಲ್ ಎಸ್ಪಿ ಕುಮಾರ ಚಂದ್ರ ಅವರ ನಿರ್ದೇಶನದಂತೆ ಪುತ್ತೂರು ಎಎಸ್ಪಿ ವೀರಯ್ಯ ಹಿರೇಮಠ್ ಅವರ ಮಾರ್ಗದರ್ಶನದಂತೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪಿಎಸ್ಸೈ ಎಂ ಎನ್ ರಾವ್ ಅವರ ನೇತೃತ್ವದ ಸ್ಕರಿಯಾ, ಜಗದೀಶ್, ಕಿರಣ್ ಕುಮಾರ್, ವಿರುಪಾಕ್ಷ ಅವರನ್ನೊಳಗೊಂಡ ವಿಶೇಷ ಪೆÇಲೀಸ್ ತಂಡ ಕೇರಳ ರಾಜ್ಯದ ಕಾಸರಗೋಡು, ಚರ್ಕಳ, ಬದಿಯಡ್ಕ, ಪೆರ್ಲ ಹಾಗೂ ಕರ್ನಾಟಕ ರಾಜ್ಯದ ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಚಿಕ್ಕಮಂಗಳೂರು, ಅರಸೀಕೆರೆ, ಶಿವಮೊಗ್ಗ, ಹಾವೇರಿ ಕಡೆಗಳಲ್ಲಿ ಹುಡುಕಾಟ ನಡೆಸಿ ಆರೋಪಿ ಇರುವ ಬಗ್ಗೆ ಮಾಹಿತಿ ಖಚಿತಪಡಿಸಿ ಡಿ 6 ರಂದು ಹಾವೇರಿ ಜಿಲ್ಲೆಯ ಕನಕಾಪುರ ಎಂಬಲ್ಲಿ ಆರೋಪಿ ನಿಂಗಪ್ಪ ಗೌಡನನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
0 comments:
Post a Comment