ಪಾಣೆಮಂಗಳೂರು ವಾಲಿಬಾಲ್ ಲೀಗ್ : ಯಂಗ್ ಅಟ್ಯಾಕರ್ಸ್ ಚಾಂಪಿಯನ್, ಟೀಂ-94 ತಂಡಕ್ಕೆ ರನ್ನರ್ಸ್ ಗೌರವ
ಬಂಟ್ವಾಳ, ಡಿಸೆಂಬರ್ 11, 2022 (ಕರಾವಳಿ ಟೈಮ್ಸ್) : ಗೇಮರ್ಸ್ ಸ್ಪೋಟ್ರ್ಸ್ ಕ್ಲಬ್ ಬೋಗೋಡಿ-ಮೆಲ್ಕಾರ್ ಇದರ ವತಿಯಿಂದ ಶನಿವಾರ (ಡಿಸೆಂಬರ್ 10) ರಾತ್ರಿ ಬೋಗೋಡಿ ಸರಕಾರಿ ಶಾಲಾ ಮೈದಾನದಲ್ಲಿ ನಡೆದ ಪಾಣೆಮಂಗಳೂರು ವಾಲಿಬಾಲ್ ಲೀಗ್ (ಪಿವಿಎಲ್-2022) ಸೀಸನ್-5 ಸ್ಥಳೀಯ 5 ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ರಾಝಿಕ್ ನಂದಾವರ ಮಾಲಕತ್ವದ ಯಂಗ್ ಅಟ್ಯಾಕರ್ಸ್ ತಂಡವು ಚಾಂಪಿಯನ್ ಆಗಿ ಮೂಡಿ ಬಂದರೆ, ಅಶ್ರಫ್ ದುಬೈ, ಅಮಾನ್ ಅಬುಧಾಬಿ ಹಾಗೂ ಶುಹೈಬ್ ಬೋಳಂಗಡಿ ಅವರ ಜಂಟಿ ಮಾಲಕತ್ವದ ಟೀಂ-94 ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿ, ಕ್ರೀಡಾ ಕ್ಷೇತ್ರವು ಯುವಕರನ್ನು ಜಾತಿ-ಮತ, ವರ್ಗ, ಪಂಗಡಗಳ ಬೇಧ ಮೀರಿ ಕ್ರೀಡಾಂಗಣದಲ್ಲಿ ಒಟ್ಟುಗೂಡಿಸುತ್ತಿದ್ದು, ಇದು ಸಮಾಜದ ಶಾಂತಿ-ಸೌಹಾರ್ದತೆಗೆ ಪೂರಕ ವಾತಾವರಣ ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ಯುವಕರನ್ನು ಉತ್ತಮ ದಾರಿಯಲ್ಲಿ ಮುನ್ನಡೆಸಲು ಪೂರಕವಾಗಿ ಇಂತಹ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು ಇಂದಿನ ಅನಿವಾರ್ಯತೆಯಾಗಿದೆ ಎಂದರು.
ಕ್ರೀಡಾಕೂಟ ಉದ್ಘಾಟಿಸಿದ ಇರಾ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿ, ಯುವಕರು ಬಿಡುವಿನ ವೇಳೆಯಲ್ಲಿ ದುಷ್ಚಟಗಳಿಂದ ದೂರವಾಗಲು ಪೂರಕವಾಗುವ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ದೈಹಿಕ, ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕೂಡಾ ಕಾಪಾಡಿಕೊಂಡು ಬರಬೇಕಾಗಿದೆ ಎಂದರಲ್ಲದೆ ವಾಲಿಬಾಲ್ ಕ್ರೀಡೆಯ ಇತಿಹಾಸವನ್ನು ಕ್ರೀಡಾಪಟುಗಳ ಮುಂದಿಟ್ಟರು.
ಕೂಟವನ್ನು ಉದ್ಘಾಟಿಸಿದ ಸ್ಥಳೀಯ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮಾತನಾಡಿ, ಯುವ ಸಮೂಹವು ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಕ್ಷೇತ್ರದಂತಹ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನ ಮಾಡುವುದರ ಜೊತೆಗೆ ತಮ್ಮ ಭವಿಷ್ಯವನ್ನೂ ಬೆಳಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಭೂಯಾ, ಉದ್ಯಮಿಗಳಾದ ಇಬ್ರಾಹಿಂ ಬಾವಾಜಿ, ಝಕರಿಯಾ ಬೋಗೋಡಿ (ಕತಾರ್), ಆಸಿಫ್ ಬೋಗೋಡಿ (ಕತಾರ್), ಅಬ್ದುಲ್ ರಹಿಮಾನ್ ಬೋಳಂಗಡಿ (ಅಬುಧಾಬಿ), ರಶೀದ್ ಕತಾರ್, ಹಬೀಬ್ ಬೋಗೋಡಿ, ಹನೀಫ್ ಬೋಗೋಡಿ, ಅಬ್ದುಲ್ ಮಜೀದ್ ಬೋಗೋಡಿ, ಮುಸ್ತಫಾ ಪಿಜೆ, ವಾಲಿಬಾಲ್ ತರಬೇತುದಾರ ಮುಹಮ್ಮದ್ ಸಿದ್ದೀಕ್ ಬಂಗ್ಲೆಗುಡ್ಡೆ, ಗೇಮರ್ಸ್ ಸ್ಪೋಟ್ರ್ಸ್ ಕ್ಲಬ್ ಪ್ರಮುಖರಾದ ರಾಶಿದ್, ಅಶ್ಪಾಕ್, ಜಾಫರ್, ಜಮಾಲ್, ಮೊದಲಾದವರು ಭಾಗವಹಿಸಿದ್ದರು.
ಗೇಮರ್ಸ್ ಸ್ಪೋಟ್ರ್ಸ್ ಕ್ಲಬ್ ಪದಾಧಿಕಾರಿಗಳಾದ ರಾಫಿ ಬೋಗೋಡಿ ಸ್ವಾಗತಿಸಿ, ಶುಹೈಬ್ ಬೋಳಂಗಡಿ ವಂದಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಪಾಣೆಮಂಗಳೂರು ಪರಿಸರದ ಯುವ ಹಾಗೂ ಪ್ರತಿಭಾವಂತ ವಾಲಿಬಾಲ್ ಕ್ರೀಡಾಪಟುಗಳನ್ನೊಳಗೊಂಡ 5 ತಂಡಗಳಾದ ಮುನ್ನ ಮಾಲಕತ್ವದ ರೈಸಿಂಗ್ ಸ್ಟಾರ್, ಇರ್ಶಾದ್ ಮಾಲಕತ್ವದ ಇಚ್ಚ ವಾರಿಯರ್ಸ್ ಹಾಗೂ ಕೈಫ್ ಮಾಲಕತ್ವದ ಗೇಮರ್ಸ್ ಕ್ಲಬ್ ತಂಡಗಳು ಕೂಟದಲ್ಲಿ ಭಾಗವಹಿಸಿತ್ತು. ನುರಿತ ವಾಲ್‍ಬಾಲ್ ಪಟುಗಳಾದ ಸಿದ್ದೀಕ್ ಬಂಗ್ಲೆಗುಡ್ಡೆ, ಮಜೀದ್ ಕೊಪ್ಪಳ, ನವೀನ್ ಮೆಲ್ಕಾರ್, ಮುಹಮ್ಮದ್ ಬೊಳ್ಳಾಯಿ, ಸಂದೇಶ್ ಮಾರ್ನಬೈಲ್, ಅಫ್ರೀದ್ ನಂದಾವರ ತೀರ್ಪುಗಾರರಾಗಿ ಸಹಕರಿಸಿದರು.
0 comments:
Post a Comment