ಬಂಟ್ವಾಳ, ಡಿಸೆಂಬರ್ 07, 2022 (ಕರಾವಳಿ ಟೈಮ್ಸ್) : ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರ ಮನವಿ ಮೇರೆಗೆ ಪಾಣೆಮಂಗಳೂರು-ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಪುಟಾಣಿಗಳ ಉಪಯೋಗಕ್ಕಾಗಿ 3 ಫ್ಯಾನ್ ಗಳನ್ನು ಕೊಡುಗೆ ನೀಡಲಾಗಿದ್ದು, ಬುಧವಾರ (ಡಿ 7) ಇದರ ಉದ್ಘಾಟನೆ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ, ಮುಂದಿನ ಸಾಲಿನ ನಿಯೋಜಿತ ಅಧ್ಯಕ್ಷ ಪ್ರಕಾಶ ಬಾಳಿಗ ಬಂಟ್ವಾಳ, ಸದಸ್ಯರುಗಳಾದ ಸದಾಶಿವ ಬಾಳಿಗ, ಹೃತೇಶ್ ಬಾಳಿಗ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮಾ, ಸಹಾಯಕಿ ಜ್ಯೋತಿ, ಸ್ಥಳೀಯರಾದ ಇಸ್ಮಾಯಿಲ್, ಇಬ್ರಾಹಿಂ, ಇರ್ಫಾನ್, ಇಕ್ಬಾಲ್, ಸಿರಾಜ್ ಸಫ್ವಾನ್ ಬಂಗ್ಲೆಗುಡ್ಡೆ, ಇಲ್ಯಾಸ್ ಮೊದಲಾದವರು ಭಾಗವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಅವರು, ನನ್ನ ಮನವಿ ಮೇರೆಗೆ ಪುಟಾಣಿಗಳ ಹಿತಾಸಕ್ತಿಗೆ ಸ್ಪಂದಿಸಿ ಅಂಗನವಾಡಿಗೆ ಫ್ಯಾನ್ ಕೊಡುಗೆ ನೀಡಿ ಸಹಕರಿಸಿದ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷರು, ನಿಯೋಜಿತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಕೃತಜ್ಞತೆಗಳು, ಮುಂದೆಯೂ ವಾರ್ಡಿನ ಸಮಾಜಮುಖಿ ಹಾಗೂ ಸಾರ್ವಜನಿಕರಿಗೆ ಪೂರಕ ಕೆಲಸ-ಕಾರ್ಯಗಳಿಗೆ ಕ್ಲಬ್ಬಿನ ಸಹಕಾರ ಅಗತ್ಯವಾಗಿದ್ದು, ಸ್ಪಂದಿಸುವಂತೆ ಮನವಿ ಮಾಡಿದರು.
0 comments:
Post a Comment