ಬಂಟ್ವಾಳ, ಡಿಸೆಂಬರ್ 27, 2022 (ಕರಾವಳಿ ಟೈಮ್ಸ್) : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೋಳಿಯಾರು ಗ್ರಾಮದ ಅಮ್ಮೆಂಬಳ ರಿಫಾಯಿಯ್ಯಾ ಜುಮಾ ಮಸೀದಿ ಹಾಗೂ ದರ್ಗಾ ಶರೀಫಿಗೆ ಅಮ್ಮೆಂಬಳ ಸಂತ ಥೋಮಸ್ ಇಗರ್ಜಿಯ ಧರ್ಮಗುರು ಮೈಕಲ್ ಡಿ’ಸಿಲ್ವಾ ಅವರು ಸೌಹಾರ್ದ ಭೇಟಿ ನೀಡಿ, ಸಿಹಿ ಹಂಚಿದರು.
ಈ ಸಂದರ್ಭ ಮಾತನಾಡಿದ ಅವರು, ಧರ್ಮಗಳು ಬೇರೆಯಾದರೂ ಏಸು ಕ್ರಿಸ್ತರ ಹಾಗೂ ಮರಿಯಂ ಅವರ ಬಗ್ಗೆ ಬೈಬಲ್ ಮತ್ತು ಕುರಾನ್‍ಗಳು ಹೇಳುತ್ತದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಸಹೋದರರೇ ಆಗಿದ್ದಾರೆ ಎಂದು ಹೇಳಿದರು.
ರಿಫಾಯಿಯಾ ಮಸೀದಿಯ ಧರ್ಮಗುರು ಫಾರೂಕ್ ಸಅದಿ ಮಾತನಾಡಿ, ಧರ್ಮಗಳು ಶಾಂತಿಯನ್ನು ಬೋಧಿಸುತ್ತದೆ. ಈಗಿನ ಕೆಟ್ಟ ಪರಿಸ್ಥಿತಿಯಲ್ಲಿ ಇಂತಹ ಭೇಟಿಗಳು ಕಾಲದ ಬೇಡಿಕೆ ಎಂದರು.
ಈ ಸಂದರ್ಭ ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಬರ್ಟ್ ಡಿ’ಸೋಜಾ, ರಿಫಾಯಿಯಾ ಜುಮಾ ಮಸೀದಿ ಅಧ್ಯಕ್ಷ ಶಮೀರ್ ಅಹ್ಮದ್, ಜೈ ಭಾರತ್ ಯುವಕ ಮಂಡಲದ ಅಧ್ಯಕ್ಷ ರಿಯಾಝ್ ಕೆ ಬಿ, ಜಾರದಗುಡ್ಡೆ ಎಸ್ಸೆಸ್ಸೆಫ್ ಅಧ್ಯಕ್ಷ ಶಮೀರ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment