ಬಂಟ್ವಾಳ, ಡಿಸೆಂಬರ್ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಚೇಳೂರು ಚೆಕ್ ಪೋಸ್ಟ್ ಬಳಿ ಸೋಮವಾರ ಕಾರ್ಯಾಚರಣೆ ನಡೆಸಿದ ಕೊಣಾಜೆ ಠಾಣಾ ಪೊಲೀಸರು ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ ನಾಲ್ಕು ಮಂದಿ ಆರೋಪಿಗಳನ್ನು ಮಾಲು ಸಹಿತ ದಸ್ತಗಿರಿ ಮಾಡಿದ್ದಾರೆ.
ಬಂಧಿತರನ್ನು ಕಾಸರಗೋಡು ಬಂಡಿಯೋಡು ನಿವಾಸಿ ಮಹಮ್ಮದ್ ನೌಫಲ್ (24), ಮಲಪ್ಪುರಂ-ಪೆÇನ್ನಾನಿ ನಿವಾಸಿ ಜಮ್ಶೀರ್ ಎಂ (24), ಮಂಜೇಶ್ವರ-ಮಂಗಲ್ಪಾಡಿ ನಿವಾಸಿ ಮಹಮ್ಮದ್ ಬಾತೀಶ್ (37) ಹಾಗೂ ಕಾಸರಗೋಡು-ಮುತ್ತತೋಡಿ ನಿವಾಸಿ ಮೊಹಮ್ಮದ್ ಅಶ್ರಫ್ (42) ಎಂದು ಹೆಸರಿಸಲಾಗಿದೆ.
ಮಾರುತಿ ಆಲ್ಟೋ ಕಾರಿನಲ್ಲಿ ಆರೋಪಿಗಳು ಬೆಂಗಳೂರಿನಿಂದ ಉಪ್ಪಿನಂಗಡಿ, ಮೆಲ್ಕಾರ್, ಬೋಳಿಯಾರ್ ಮಾರ್ಗವಾಗಿ ಕೇರಳಕ್ಕೆ ನಿಷೇಧಿತ ಅಮಲು ಪದಾರ್ಥ ಸಾಗಾಟ ಮಾಡುತ್ತಿರುವ ಬಗ್ಗೆ ಕೊಣಾಜೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.
ಬಂಧಿತ ಆರೋಪಿಗಳಿಂದ 3,19,000 ರೂಪಾಯಿ ಮೌಲ್ಯದ 32,195 ಕೆಜಿ ಗಾಂಜಾ, 13,000 ರೂಪಾಯಿ ಮೌಲ್ಯದ ಮೊಬೈಲ್ ಫೆÇೀನ್, 2 ಟ್ರಾವೆಲ್ ಬ್ಯಾಗ್ ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಆಲ್ಟೊ ಕಾರು ಸಹಿತ ಒಟ್ಟು 6 ಲಕ್ಷದ 32 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಹಾಯಕ ಪೆÇಲೀಸ್ ಆಯುಕ್ತ ದಿನಕರ ಶೆಟ್ಟಿ ಹಾಗೂ ಕೊಣಾಜೆ ಠಾಣೆ ಇನ್ಸ್‍ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪಿಎಸ್ಸೈ ಶರಣಪ್ಪ ಭಂಡಾರಿ, ಸಿಬ್ಬಂದಿಗಳಾದ ಶೈಲೇಂದ್ರ, ಮಹಮ್ಮದ್ ಷರೀಫ್, ಮಹೇಶ್, ಪುರುಷೋತ್ತಮ, ದೀಪಕ್, ಅಶ್ವಿನ್, ಸುರೇಶ್, ಅಂಬರೀಶ್, ಬರಮ ಬಡಿಗೇರ್, ರೇಷ್ಮಾ, ಸುನೀತಾ ಅವರು ಈ ಕಾರ್ಯಾಚರಣೆ ತಂಡದಲ್ಲಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
0 comments:
Post a Comment