ಬಂಟ್ವಾಳ, ಡಿಸೆಂಬರ್ 08, 2022 (ಕರಾವಳಿ ಟೈಮ್ಸ್) : ಅಪ್ರಾಪ್ತ ಶಾಲಾ ಬಾಲಕಿಯನ್ನು ಅಪ್ರಾಪ್ತ ಬಾಲಕನೇ ಅತ್ಯಾಚಾರ ನಡೆಸಿ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ 15 ವರ್ಷದ ಸಂತ್ರಸ್ತೆ ತನ್ನ ತಂದೆ, ತಾಯಿ ಹಾಗೂ ಅಕ್ಕಳೊಂದಿಗೆ ವಾಸವಾಗಿದ್ದು, ಈಕೆಗೆ ಇನ್ಸ್ಟಾಗ್ರಾಂ ಮೂಲಕ ಸಂತ್ರಸ್ತೆಗೆ ಅಪ್ರಾಪ್ತ ಬಾಲಕನ ಪರಿಚಯವಾಗಿರುತ್ತದೆ. ಬಳಿಕ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಪದೇ ಪದೇ ಸಂತ್ರಸ್ತೆಯ ಮನೆಗೆ ಬಂದು ಹೋಗುತ್ತಿದ್ದನು. ಡಿಸೆಂಬರ್ 2 ರಂದು ಸಂತ್ರಸ್ತೆ ಮನೆಯಲ್ಲಿದ್ದ ಸಮಯ ಬಾಲಕ ಸಂತ್ರಸ್ತೆಗೆ ರಾತ್ರಿ ಸುಮಾರು 8.30 ರ ವೇಳೆಗೆ ದೂರವಾಣಿ ಕರೆ ಮಾಡಿ ಸಂತ್ರಸ್ತೆಯ ಮನೆಗೆ ಬಂದಿದ್ದು, ಸಂತ್ರಸ್ತೆಯು ತಾಯಿಯ ಜೊತೆ ಬಾಲಕನ ಮನೆಗೆ ಹೋಗಿ ಬರುವುದಾಗಿ ಹೇಳಿ ಆತನ ಜೊತೆ ಸ್ಕೂಟರಿನಲ್ಲಿ ಹೋಗಿದ್ದು, ಈ ಸಂದರ್ಭ ಬಾಲಕಿಯ ಜೊತೆ ಲೈಂಗಿಕ ಸಂಭೋಗ ಎಸಗಿ ಸಂತ್ರಸ್ತೆಯನ್ನು ಮನೆಗೆ ಬಿಟ್ಟು ಹೋಗಿರುತ್ತಾನೆ ಎಂದು ದೂರಲಾಗಿದೆ.
ಸಂತ್ರಸ್ತೆ ಬಾಲಕಿಯ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 91/2022 ಕಲಂ 366(ಎ), 376 ಐಪಿಸಿ ಮತ್ತು ಕಲಂ 4 ಪೋಕ್ಸೋ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲನ್ಯಾಯ ಮಂಡಳಿಯ ಎದುರು ಹಾಜರುಪಡಿಸಲಾಗಿದ್ದು, ಬಾಲಕನನ್ನು ರಿಮಾಂಡ್ ಹೋಂ ಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment