ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಬಂಟ್ವಾಳ ವಕೀಲರಿಂದ ಸರಕಾರಕ್ಕೆ ಆಗ್ರಹ - Karavali Times ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಬಂಟ್ವಾಳ ವಕೀಲರಿಂದ ಸರಕಾರಕ್ಕೆ ಆಗ್ರಹ - Karavali Times

728x90

17 December 2022

ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಬಂಟ್ವಾಳ ವಕೀಲರಿಂದ ಸರಕಾರಕ್ಕೆ ಆಗ್ರಹ

ಬಂಟ್ವಾಳ, ಡಿಸೆಂಬರ್ 17, 2022 (ಕರಾವಳಿ ಟೈಮ್ಸ್) : ವಕೀಲರ ರಕ್ಷಣಾ ಕಾಯ್ದೆ ಮಸೂದೆಯನ್ನು ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಿ ಅಂಗೀಕರಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನ ಜಿಲ್ಲಾ ಕಾನೂನು ವೇದಿಕೆ (ರಿ) ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಂಟ್ವಾಳ ತಾಲೂಕು ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.



ಇಂದು ವಕೀಲರಿಗೆ ರಕ್ಷಣೆ ಇಲ್ಲದಂತಾಗಿದ್ದು, ಹಲವಾರು ಸಂಧರ್ಭಗಳಲ್ಲಿ ವಕೀಲರ ಮೇಲೆ ದಾಳಿಗಳಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಈ ನಿಟ್ಟಿನಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ತಕ್ಷಣ ಜಾರಿಗೊಳಿಸಬೇಕೆಂದು ವಕೀಲರ ಆಗ್ರಹವಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಜಿಲ್ಲಾ ಕಾನೂನು ವೇದಿಕೆಯ ತಾಲೂಕು ಅಧ್ಯಕ್ಷ ಸುರೇಶ್ ಪೂಜಾರಿ, ಹಿರಿಯ ವಕೀಲರಾದ  ಚಂದ್ರಶೇಖರ ಕೆ ವಿ, ಹಾತಿಮ್ ಅಹಮ್ಮದ್, ಚಂದ್ರಶೇಖರ ರಾವ್ ಪುಂಚಮೆ, ರಾಜಾರಾಮ್ ನಾಯಕ್, ಸುರೇಶ್ ಕುಮಾರ್ ನಾವೂರು, ಉಮಾಕರ್ ಬಂಗೇರ, ಮಹಮ್ಮದ್ ಕಬೀರ್ ಕೆಮ್ಮಾರ, ಉಮೇಶ್ ಕುಮಾರ್ ವೈ, ಅಬ್ದುಲ್ ರಹಿಮಾನ್, ರಿಚಾರ್ಡ್ ಡಿ’ಕೋಸ್ತ, ಸತೀಶ್ ಬಿ, ಗಂಗಾಧರ್ ನಾಯಕ್, ಯುವ ವಕೀಲರಾದ ವೀರೇಂದ್ರ ಸಿದ್ದಕಟ್ಟೆ, ಮೋಹನ್ ಕುಮಾರ್ ಕಡೇಶ್ವಾಲ್ಯ, ಚಂದ್ರಶೇಖರ್ ಬೈರಿಕಟ್ಟೆ, ಅಬ್ದುಲ್ ಜಲೀಲ್ ಎನ್, ತುಳಸೀದಾಸ್ ವಿಟ್ಲ, ಮಹಮ್ಮದ್ ಅಶ್ರಫ್, ಸಾಯಿನಾಥ್ ಗೌಡ, ಲಕ್ಮೀನಾರಾಯಣ ಸಿದ್ದಕಟ್ಟೆ, ಮಹಮ್ಮದ್ ಮುಂಝಿರ್ ಮೊದಲಾದವರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಬಂಟ್ವಾಳ ವಕೀಲರಿಂದ ಸರಕಾರಕ್ಕೆ ಆಗ್ರಹ Rating: 5 Reviewed By: karavali Times
Scroll to Top