ಬಂಟ್ವಾಳ, ಡಿಸೆಂಬರ್ 07, 2022 (ಕರಾವಳಿ ಟೈಮ್ಸ್) : ಯುವ ವಕೀಲ ಕುಲ್ ದೀಪ್ ಶೆಟ್ಟಿಯವರನ್ನು ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ನಡೆಸಿದ ಪೂಂಜಾಲಕಟ್ಟೆ ಪೊಲೀಸರ ಅಮಾನತಿಗೆ ಆಗ್ರಹಿಸಿ ಬಂಟ್ವಾಳ ನ್ಯಾಯಾಲಯದ ಮುಂಭಾಗದಲ್ಲಿ ಯುವ ವಕೀಲರ ವೇದಿಕೆ ನೇತೃತ್ವದಲ್ಲಿ ಬುಧವಾರ (ಡಿ 7) ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ವಕೀಲ ಸುರೇಶ್ ಶೆಟ್ಟಿ, ಪೊಲೀಸರ ಈ ಕೃತ್ಯವು ಖಂಡನೀಯವಾಗಿದ್ದು ಇದು ಇಡೀ ವಕೀಲ ಸಮುದಾಯವನ್ನೇ ಅವಮಾನಿಸುವ ಕ್ರಮವಾಗಿದೆ. ಇದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಪೊಲೀಸರ ಇಂತಹ ಕೃತ್ಯದ ವಿರುದ್ಧ ಇಡೀ ವಕೀಲ ಸಮುದಾಯ ಒಗ್ಗಟ್ಟಾಗಿದ್ದು ಕೂಡಲೇ ಹಲ್ಲೆ ಸಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ತಪ್ಪಿದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರಲ್ಲದೆ ವಕೀಲರ ಮೇಲೆಯೇ ಇಂತಹ ದೌರ್ಜನ್ಯ ನಡೆದರೆ ಸಾಮಾನ್ಯ ಜನರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ವಕೀಲರಾದ ಕೆ ವಿ ಭಟ್, ಎ ಕೆ ರಾವ್, ಸುರೇಶ್ ಪೂಜಾರಿ, ಪ್ರಕಾಶ್ ನಾರಾಯಣ ಜೆಡ್ಡು, ಪದ್ಮನಾಭ ಅಳಿಕೆ, ಹಾತಿಮ್ ಅಹಮದ್, ಎ ಮೋಹನ್, ಚಂದ್ರಶೇಖರ್ ರಾವ್ ಪುಂಚಮೆ, ವಿಶ್ವನಾಥ ಗೌಡ, ಮಹಮ್ಮದ್ ಕಬೀರ್ ಕೆಮ್ಮಾರ, ಯುವ ವಕೀಲರಾದ ಮಲಿಕ್ ಅನ್ಸಾರ್ ಕರಾಯ, ಮೋಹನ್ ಕುಮಾರ್ ಕಡೇಶ್ವಾಲ್ಯ, ಅಬ್ದುಲ್ ಜಲೀಲ್, ತುಳಸೀದಾಸ್ ವಿಟ್ಲ, ಎ ಪಿ ಮೊಂತೆರೋ, ಪ್ರಶಾಂತ್ ಕೆ, ನಿತಿನ್, ಪ್ರದೀಪ್, ಸೆಕೀನಾ, ಮಾಧುರಿ, ನಿರ್ಮಲ, ಶುಭ, ಸುಷ್ಮಾ, ಕಾವ್ಯಶ್ರೀ, ದೀಪಕ್, ಮಹಮ್ಮದ್ ಗಝಾಲಿ, ಮಹಮ್ಮದ್ ಅಶ್ರಫ್, ಮಹಮ್ಮದ್ ಮುಂಝಿರ್, ಕೃಷ್ಣ, ಲಕ್ಮೀನಾರಾಯಣ ಸಿದ್ದಕಟ್ಟೆ, ವೀರೇಂದ್ರ ಸಿದ್ದಕಟ್ಟೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment