ಬಂಟ್ವಾಳ, ನವೆಂಬರ್, 09, 2022 (ಕರಾವಳಿ ಟೈಮ್ಸ್) : ವ್ಯಕ್ತಿಗೆ ಜಾತಿ ನಿಂದನೆಗೈದರು ಹಲ್ಲೆ ನಡೆಸಿದ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.
ವಿಟ್ಲ ಸಮೀಪದ ಪುಣಚ ಗ್ರಾಮದ ಪೆರಿಯಾಲ್ತಡ್ಕ ನಿವಾಸಿ ದೈಯು ಎಂಬವರ ಪುತ್ರ ಪಿಜಿನ (65) ಎಂಬವರೇ ಜಾತಿ ನಿಂದನೆ ಹಾಗೂ ಹಲ್ಲೆಗೊಳಗಾದ ವ್ಯಕ್ತಿ. ಇವರು ಸುಮಾರು 15 ದಿನಗಳ ಹಿಂದೆ ಪರಿಯಲ್ತಡ್ಕದಲ್ಲಿರುವ ಸಂತೋಷ ಎಂಬವರ ಕೋಳಿ ಅಂಗಡಿಗೆ ಮೊಟ್ಟೆ ತರಲು ಹೋದಾಗ ಆ ಸಮಯ ಅಂಗಡಿಯಲ್ಲಿ ಕುಳಿತ್ತಿದ್ದ ಆದರ್ಶ ಎಂಬವನಲ್ಲಿ ನೀನು ಯಾಕೆ ಇದೇ ಅಂಗಡಿಯಲ್ಲಿ ಪಾಪಾರಿ ಬಿದ್ದಿರುತ್ತಿ. ನಿನಗೆ ಬೇರೆ ಕೆಲಸ ಇಲ್ಲವಾ ಎಂದು ತಮಾಷೆಯಾಗಿ ಹೇಳಿದ್ದನು. ಇದನ್ನೇ ಗಂಭೀರವಾಗಿ ಪರಿಗಣಿಸಿದ ಆರೋಪಿ ಆದರ್ಶ ಇದೇ ದ್ವೇಶದಿಂದ ಪಿಜಿನ ಅವರು ನ 3 ರಂದು ಸಂಜೆ 7 ಗಂಟೆಗೆ ಸಂತೋಷರ ಅಂಗಡಿಗೆ ಹೋಗಿ ಮೊಟ್ಟೆಯ ಬಾಬ್ತು 50/- ರೂಪಾಯಿ ಹಣ ಕೊಟ್ಟು ಅಂಗಡಿಯಿಂದ ವಾಪಾಸು ಬರುತ್ತಿರುವಾಗ ಆದರ್ಶ ಅವರನ್ನುದ್ದೇಶಿಸಿ ಹೇ ಬ್ಯಾವರ್ಸೀ, ಮಾರಿ ಮನುಷ್ಯ, ಕೀಳು ಜಾತಿಯ ದಿಕ್ಕ ಎಂದು ಬೈದು ಜಾತಿ ನಿಂದನೆ ಮಾಡಿ ಅಂಗಡಿಯಿಂದ ಹೊರಕ್ಕೆ ದೂಡಿದ ಪರಿಣಾಮ ಪಿಜಿನ ಅವರ ತಲೆಯ ಭಾಗ ಅಂಗಡಿಯ ಹೊರಕ್ಕೆ ಹಾಕಿದ ಇಂಟರ್ ಲಾಕ್‍ಗೆ ತಾಗಿ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿರುತ್ತದೆ. ಈ ಸಂದರ್ಭ ಅಲ್ಲೇ ಇದ್ದ ಆತನ ತಮ್ಮ ರಾಕೇಶ್ ಎಂಬಾತ ಪಿಜಿನ ಅವರ ಎದೆಯ ಎಡಭಾಗಕ್ಕೆ ತುಳಿದಿದ್ದು, ಇದನ್ನು ಪ್ರಶ್ನಿಸಿದ ಪಿಜಿನ ಅವರಿಗೆ ಕೃಷ್ಣಪ್ಪ ಎಂಬಾತ ನಿನ್ನನ್ನು ತುಳಿಯುವುದಲ್ಲ ಕೊಂದು ಹಾಕಬೇಕು, ನೀನು ಏನು ಮಾಡುತ್ತಿ ನಾಯಿ ಎಂದು ಬೈಯುತ್ತಾ ಎಡ ಕೆನ್ನೆಗೆ ಆತನ ಕೈಯಿಂದ ಎರಡು ಏಟು ಹೊಡೆದಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಪಿಜಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 171-2022 ಕಲಂ: 504, 323, 506 ಜೊತೆಗೆ 34 ಐಪಿಸಿ ಮತ್ತು ಕಲಂ 3(1)(ಎಸ್), 3(2)(ವಿಎ) ಎಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment