ಬಂಟ್ವಾಳ, ನವೆಂಬರ್ 15, 2022 (ಕರಾವಳಿ ಟೈಮ್ಸ್) : ತಾಲೂಕಿನ ಬೋಳಂತೂರು ಗ್ರಾಮದ ಮದಕ ಎಂಬಲ್ಲಿ ಅಟೋ ರಿಕ್ಷಾ ಚಾಲಕನನ್ನು ತಡೆದ ಮೂರು ಮಂದಿ ಆರೋಪಿಗಳು ಚಾಲಕ ಬೋಳಂತೂರು-ನಾಡಾಜೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಶಾಕೀರ್ (30) ಎಂಬವನಿಗೆ ಮಾರಕಾಯುಧದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ಮುಂಜಾನೆ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಕಿರ್ ತನ್ನ ಕೆಎ-70-4096 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಸ್ನೇಹಿತರಾದ ಆರೀಸ್, ಶಕೀರ್ ಕಲ್ಪನೆ ಮತ್ತು ಚೈರ್ ಮುರ ಮನೆ ಎಂಬವರೊಂದಿಗೆ ಪೂಂಜಾಲಕಟ್ಟೆಯಲ್ಲಿ ನಡೆದ ಕಬ್ಬಡಿ ಪಂದ್ಯಾಟ ಮುಗಿಸಿ ಸೋಮವಾರ ಮುಂಜಾನೆ 3 ಗಂಟೆ ವೇಳೆಗೆ ಕೊಕ್ಕಪುಣಿ ಎಂಬಲ್ಲಿ ಗೆಳೆರನ್ನು ಇಳಿಸಿ ತನ್ನ ಮನೆಯಾದ ನಾಡಾಜೆ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಬರುತ್ತಾ ಬೆಳಗಿನ ಜಾವ 3:15 ಗಂಟೆ ವೇಳೆಗೆ ಬೊಳಂತೂರು ಗ್ರಾಮದ ಮದಕ ಎಂಬಲ್ಲಿ ತಲುಪಿದಾಗ ಸುಮಾರು 30 ಅಡಿ ದೂರ ರಸ್ತೆಯ ಬಲ ಭಾಗದಲ್ಲಿ ಮೂರು ಜನ ನಿಂತಿದ್ದು ಅವರಲ್ಲಿ ಒರ್ವ ರಿಕ್ಷಾದ ಗ್ಲಾಸ್‍ಗೆ ಟಾರ್ಚ್ ಲೈಟ್ ಬೆಳಕು ಹಾಯಿಸಿದ್ದು, ಅದರಿಂದಾಗಿ ರಿಕ್ಷಾವನ್ನು ನಿಧಾ£ಸಿ ಮುಂದೆ ಹೋದಾಗ ಮೂರು ಜನ ಸೇರಿ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಆ ಮೂವರಲ್ಲಿ ಓರ್ವ ಪರಿಚಯದ ಸಾಧಿಕ್ @ ಕುಂಡ ಎಂಬನಾಗಿದ್ದು ಶಾಕೀರ್ ನನ್ನು ಉದ್ದೇಶಿಸಿ “ಏ ಬೇವಾರ್ಸಿ, ನನ್ನ ಮೇಲೆ ನೀನು ಹಾಗೂ ನಿನ್ನ ಅಣ್ಣ ಸೇರಿಕೊಂಡು ಕೇಸು ಮಾಡಿದ್ದೀರಾ ಸುಮಾರು ಸಮಯದಿಂದ ನೀನು ಒಬ್ಬನೇ ಸಿಗುವುದನ್ನು ಕಾಯುತ್ತಿದ್ದು ಇವತ್ತು ಸಿಕ್ಕಿದ್ದೀಯಾ, ನಿನ್ನನ್ನು ಒಂದು ಕೈ ನೋಡುತ್ತೇನೆ” ಎಂದು ಹೇಳಿ ತಲವಾರು ರೀತಿಯ ಆಯಧವನ್ನು ತೋರಿಸಿ ಅದರಿಂದ ಕಡಿಯಲು ಬಂದಾಗ ಶಾಕೀರ್ ಬಲಗೈಯನ್ನು ಅಡ್ಡ ಹಿಡಿದಿದ್ದು ಆಯುಧ ತಾಗಿದ ಪರಿಣಾಮ ಕುತ್ತಿಗೆಯ ಬಲಭಾಗ, ಬಲ ಕಿವಿ ಮತ್ತು ಬಲಕೈ ಮಣಿ ಗಂಟಿನ ಬಳಿ ರಕ್ತ ಗಾಯವಾಗಿರುತ್ತದೆ, ಸಾಧಿಕ್ ಜೊತೆಗಿದ್ದ ಮುಖ ಪರಿಚಯದ ಇನ್ನಿಬ್ಬರು ಆತನಿಗೆ ಸಹಕರಿಸಿ ಒಬ್ಬಾತ ಸೊಂಟಕ್ಕೆ ತುಳಿದಿದ್ದು, ಇನ್ನೊಬ್ಬನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಕೊಂದು ಹಾಕುತ್ತೇವೆ ಎಂದು ಬೆದರಿಸಿ ಪರಾರಿಯಾಗಿರುತ್ತಾರೆ.
ನಾಲ್ಕು ವರ್ಷದ ಹಿಂದೆ ಶಾಕೀರ್ ದೊಡ್ಡಪ್ಪನ ಮಗ ರಫೀಕ್ ನಿಗೂ ಆರೋಪಿ ಸಾಧಿಕನಿಗೂ ಆದ ಗಲಾಟೆಯ ವಿಚಾರದಲ್ಲಿ ಶಾಕೀರ್ ಅವರು ರಫೀಕ್ ಪರವಾಗಿದ್ದ ವಿಚಾರವೇ ಈ ಕೃತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡ ಶಾಕೀರ್ ನನ್ನು ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 176/2022 ಕಲಂ 341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment