ಬೆಳ್ತಂಗಡಿ, ನವೆಂಬರ್ 13, 2022 (ಕರಾವಳಿ ಟೈಮ್ಸ್) : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು, ನಾರಾವಿ ಗ್ರಾಮದ, ಅರಸಿಕಟ್ಟೆ ಶಿವಪ್ರಭಾ ಮನೆ ನಿವಾಸಿ ದಿವಂಗತ ಶಿವಪ್ಪ ನಾಯ್ಕ ಅವರ ಪತ್ನಿ ಪ್ರಭಾವತಿ ನಾಯ್ಕ (67) ಅವರ ಮನೆಗೆ ಶನಿವಾರ (ನ 12) ಸಂಜೆ 7 ಗಂಟೆ ವೇಳೆಗೆ ನುಗ್ಗಿದ ನಾಲ್ಕು ಮಂದಿ ಅಪರಿಚಿತ ಮುಸುಕುಧಾರಿ ದುಷ್ಕರ್ಮಿಗಳು ನಗದು ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಪ್ರಭಾವತಿ ಅವರು ತಮ್ಮ ಹಳೆ ಮನೆಯಲ್ಲಿ ಒಬ್ಬಂಟಿಯಾಗಿರುವ ಸಮಯ ನಾಲ್ಕು ಜನ ಮುಸುಕುದಾರಿ ದುಷ್ಕರ್ಮಿಗಳು ಏಕಾಏಕಿ ಸುತ್ತುವರಿದು “ಬಂಗಾರ್ ಪೂರಾ ಕೊರ್ಲೆ” ಎಂದು ಹೇಳಿ ಪ್ರಭಾವತಿ ಅವರ ಕೈಗಳನ್ನು ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ ಬಾಯಿಗೆ ಬಟ್ಟೆ ತುರುಕಿಸಿ ಅವರ ಕುತ್ತಿಗೆಯಲ್ಲಿದ್ದ 2 ಪವನ್ ತೂಕದ ಒಂದು ಚಿನ್ನದ ಸರ, ಕಿವಿಯಲ್ಲಿದ್ದ ಮುಕ್ಕಾಲು ಪವನ್ ತೂಕದ ಒಂದು ಜೊತೆ ಬೆಂಡೋಲೆಯನ್ನು ಬಲಾತ್ಕಾರವಾಗಿ ತೆಗೆದು ನಂತರ ಅವರ ಹೊಸಮನೆಯೊಳಗೆ ಹೋಗಿ ಅರ್ಧ ಗಂಟೆ ಬಳಿಕ “ಎಂಕ್ಲು ಬತ್ತಿನಾ ಕೆಲಸ ಆಂಡ್” ಎಂದು ಹೇಳಿ ಅಲ್ಲಿಂದ ಹೋಗಿದ್ದಾರೆ. ಪ್ರಭಾವತಿ ಹೇಗೂ ಕೊಸರಾಡಿಕೊಂಡು ತನ್ನ ಕೈಗೆ ಮತ್ತು ಕಾಲಿಗೆ ಕಟ್ಟಿದ ಹಗ್ಗವನ್ನು ಬಿಡಿಸಿಕೊಂಡು ತನ್ನ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ಅವರು ಬಂದ ಬಳಿಕ ಮನೆಯ ಒಳಗೆ ಹೋಗಿ ನೋಡಿದ್ದು, ಬೆಡ್ ರೂಮಿನನಲ್ಲಿ ಬೆಡ್ ಕೆಳಗೆ ಇರಿಸಿದ್ದ ಸುಮಾರು 6 ಪವನ್ ತೂಕದ 3 ಚಿನ್ನದ ಬಳೆಗಳು, 1.5 ಪವನ್ ತೂಕದ 3 ಚಿನ್ನದ ಉಂಗುರಗಳು, 5 ಪವನ್ ತೂಕದ 3 ಎಲೆಯ ಚಿನ್ನದ ಚೈನ್ ಒಂದನ್ನು ದೋಚಿರುವುದಲ್ಲದೇ ಅಡುಗೆ ಕೋಣೆಯಲ್ಲಿರಿಸಿದ್ದ 10 ಸಾವಿರ ರೂಪಾಯಿ ನಗದು ಸಹಿತ ದೋಚಿರುವುದು ಕಂಡು ಬಂದಿರುತ್ತದೆ. ದುಷ್ಕರ್ಮಿಗಳು ದೋಚಿದ ನಗದು ಸಹಿತಒಟ್ಟು ಸೊತ್ತುಗಳ ಮೌಲ್ಯ 4.60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 70/2022 ಕಲಂ 394 ಐಪಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment