ಮಕ್ಕಳು ಹಾದಿ ತಪ್ಪಿದರೆ ಅದಕ್ಕೆ ಪೋಷಕರು ಸಮಾನ ಪಾಲುದಾರರು : ಇಲ್ಯಾಸ್ ಅರ್ಶದಿ ಎಚ್ಚರಿಕೆ - Karavali Times ಮಕ್ಕಳು ಹಾದಿ ತಪ್ಪಿದರೆ ಅದಕ್ಕೆ ಪೋಷಕರು ಸಮಾನ ಪಾಲುದಾರರು : ಇಲ್ಯಾಸ್ ಅರ್ಶದಿ ಎಚ್ಚರಿಕೆ - Karavali Times

728x90

26 November 2022

ಮಕ್ಕಳು ಹಾದಿ ತಪ್ಪಿದರೆ ಅದಕ್ಕೆ ಪೋಷಕರು ಸಮಾನ ಪಾಲುದಾರರು : ಇಲ್ಯಾಸ್ ಅರ್ಶದಿ ಎಚ್ಚರಿಕೆ

ಬಂಟ್ವಾಳ, ನವೆಂಬರ್ 27, 2022 (ಕರಾವಳಿ ಟೈಮ್ಸ್) : ಭಗವಂತ ಕರುಣಿಸುವ ಅತ್ಯಂತ ಮಹತ್ವದ ಭಾಗ್ಯವಾಗಿದೆ ಸಂತಾನ ಭಾಗ್ಯ. ಭಗವಂತ ಕರುಣಿಸಿದ ಮಕ್ಕಳನ್ನು ಸಮಾಜ, ಸಮುದಾಯ ಹಾಗೂ ದೇಶಕ್ಕೆ ಪೂರಕವಾಗಿ ಬೆಳೆಸಿ ಆ ಮೂಲಕ ಇಹ-ಪರ ಮೋಕ್ಷ ಕಂಡುಕೊಳ್ಳುವುದು ಹೆತ್ತವರ ಮಹತ್ವದ ಜವಾಬ್ದಾರಿಯಾಗಿದ್ದು, ಮಕ್ಕಳೇನಾದರೂ ಹಾದಿ ತಪ್ಪಿ ಅನಾಹುತಕ್ಕೆ ಕಾರಣರಾದರೆ ಹೆತ್ತವರು ಕೂಡಾ ಅದರಲ್ಲಿ ಸಮಾನ ಪಾಲುದಾರರಾಗುತ್ತಾರೆ ಎಂದು ಕಲಾಯಿ ಮದೀನಾ ಜುಮಾ ಮಸೀದಿ ಖತೀಬ್ ಇಲ್ಯಾಸ್ ಅರ್ಶದಿ ಆತೂರು ಎಚ್ಚರಿಸಿದರು. 

ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವಠಾರದ ಮರ್ಹೂಂ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ಶನಿವಾರ (ನ 26) ರಾತ್ರಿ ನಡೆದ ಶಂಸುಲ್ ಉಲಮಾ (ಖ ಸಿ) ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದ ಅವರು ಮಕ್ಕಳ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿ ಅವರ ಉತ್ತಮ ಬೆಳವಣಿಗೆಯಲ್ಲಿ ಪಾತ್ರ ವಹಿಸಬೇಕಾದ ಹೆತ್ತವರು ಮಕ್ಕಳನ್ನು ನಿರ್ಲಕ್ಷಿಸಿ ನಾವು ಮಾತ್ರ ಸಚ್ಚಾರಿತ್ರ್ಯವಂತರಾದರೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ತಾವುಗಳು ಸಚ್ಚಾರಿತ್ರ್ಯ, ಸುಂಸ್ಕøತ, ಸಭ್ಯರಾದ ಮಾತ್ರಕ್ಕೆ ಜಯಶಾಲಿಗಳಾಗಲು ಸಾದ್ಯವಿಲ್ಲ. ಮಕ್ಕಳು ಹಾದಿ ತಪ್ಪಿದ ಕಾರಣಕ್ಕೆ ಪೋಷಕರು ಇಹ-ಪರ ನಷ್ಟ ಅನುಭವಿಸಬೇಕಾದ ದುರಂತ ಸನ್ನಿವೇಶ ನಿರ್ಮಾಣವಾಗಲಿದೆ ಎಂದವರು ಹೇಳಿದರು. 

ಸಂಪೂರ್ಣವಾಗಿ ಕ್ರೀಡೆ, ಮನೋರಂಜನೆ ಮೊದಲಾದ ಅಧಾರ್ಮಿಕವಾಗಿ ಬೋಧರಹಿತರಾಗಿ ಜೀವಿಸುತ್ತಿರುವ ಯುವ ಜನಾಂಗವನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದ್ದು, ಲೌಕಿಕ ಆಡಂಬರಗಳೆಲ್ಲವೂ ಮಿತಿಯಲ್ಲಿದ್ದಾಗ ಅಧಾರ್ಮಿಕ ಅನಾಹುತಗಳು ಸಂಭವಿಸುವುದನ್ನು ತಪ್ಪಿಸಬಹುದು ಎಂದು ಇಲ್ಯಾಸ್ ಅರ್ಶದಿ ಇದೇ ವೇಳೆ ಅಭಿಪ್ರಾಯಪಟ್ಟರು.



ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ತೋಡಾರು, ಅಗಲಿದ ಮಹಾನ್ ನಾಯಕರ ಅನುಸ್ಮರಣೆಯು ನಮ್ಮ ಏಳಿಗೆ ಹಾಗೂ ವಿಜಯಕ್ಕೆ ಅನಿವಾರ್ಯವಾಗಿದೆಯೇ ಹೊರತು, ಮಹಾನ್ ವ್ಯಕ್ತಿಗಳಿಗೆ ನಮ್ಮ ಅನುಸ್ಮರಣೆಯಿಂದ ಏನೂ ಆಗಲಿಕ್ಕಿಲ್ಲ. ಅವರು ಏರುವ ಹಂತಕ್ಕೆ ಏರಿ ಆಗಿದೆ. ಅವರ ಅನುಸ್ಮರಣೆ, ಅವರನ್ನು ಗೌರಿವಿಸುವ ಮೂಲಕ ನಮ್ಮ ವಿಜಯವನ್ನು ನಾವು ಖಾತ್ರಿಪಡಿಸಿಕೊಳ್ಳಬೇಕಷ್ಟೆ ಎಂದರಲ್ಲದೆ ಸನ್ಮಾನಗಳು ವ್ಯಕ್ತಿಗೆ ಸಲ್ಲುವ ಬದಲು ವ್ಯಕ್ತಿತ್ವಕ್ಕೆ ಹಾಗೂ ಅವರು ಪ್ರತಿನಿಧಿಸುವ ಮಹತ್ವದ ಜವಾಬ್ದಾರಿಗೆ ಸಲ್ಲಬೇಕು ಎಂದರು. 

ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ ದುವಾ ನೆರವೇರಿಸಿದರು. ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ದ ಕ ಜಿಲ್ಲಾ ವೆಸ್ಟ್ ಉಪಾಧ್ಯಕ್ಷ ಎ ಎಂ ಅಬೂಸ್ವಾಲಿಹ್ ಫೈಝಿ ಅನುಸ್ಮರಣಾ ಭಾಷಣಗೈದರು. 

ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಹಾಜಿ ಉಬೈದುಲ್ಲಾ ಗೂಡಿನಬಳಿ, ಪ್ರಮುಖರಾದ ಅಬ್ದುಲ್ ಖಾದರ್ ಬೋಗೋಡಿ, ಅಬ್ದುಲ್ ಖಾದರ್ ಮದನಿ, ಅಬೂಬಕ್ಕರ್ ಮದನಿ, ಖಲೀಲ್ ದಾರಿಮಿ, ಹನೀಫ್ ಯಮಾನಿ, ಮುಹಮ್ಮದ್ ರಿಳ್ವಾನ್, ಹಾಜಿ ಅಬೂಬಕ್ಕರ್ ಎನ್ ಬಿ, ರಫೀಕ್ ಇನೋಳಿ, ಮುಹಮ್ಮದ್ ಶಫೀಕ್, ಮುಹಮ್ಮದ್ ಹನೀಫ್ ಡ್ರೈ ಫಿಶ್, ಅಬ್ದುಲ್ ಮಜೀದ್ ಬೋಳಂಗಡಿ, ಇಸಾಕ್ ಪೇಷನ್ ವೇರ್, ಬಶೀರ್ ಕೆ4, ಅಹಮದ್ ಶಾಫಿ ಹಾಜಿ, ಅಬ್ದುಲ್ ಮುತ್ತಲಿಬ್, ಅಶ್ರಫ್ ಪರ್ಲಿಯ, ಹನೀಫ್ ಇಲೆಕ್ಟ್ರಿಶಿಯನ್ ಪರ್ಲಿಯಾ, ಸಲಾಂ ಸೆಂಟರಿಂಗ್, ಉಮ್ಮರ್ ಫಾರೂಖ್ ಹಾಜಿ ಪಿವಿಎಸ್, ಶೌಕತ್ ಬಂಗ್ಲೆಗುಡ್ಡೆ, ಇರ್ಶಾದ್ ಡ್ರೀಮ್ಸ್ ಗೂಡಿನಬಳಿ, ಶಹೀರ್ ಮೊದಲಾದವರು ಭಾಗವಹಿಸಿದ್ದರು. 

ಶಾಖಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಶೀರ್ ಬೇಕರಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಖಾ ಸದಸ್ಯ ಪಿ ಐ ಅಬ್ದುಲ್ ಅಝೀಝ್ ವಂದಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮಕ್ಕಳು ಹಾದಿ ತಪ್ಪಿದರೆ ಅದಕ್ಕೆ ಪೋಷಕರು ಸಮಾನ ಪಾಲುದಾರರು : ಇಲ್ಯಾಸ್ ಅರ್ಶದಿ ಎಚ್ಚರಿಕೆ Rating: 5 Reviewed By: karavali Times
Scroll to Top