ಪುತ್ತೂರು, ನವೆಂಬರ್, 12, 2022 (ಕರಾವಳಿ ಟೈಮ್ಸ್) : ಮನೆ ಕೆಲಸ ಮಾಡುವ ವ್ಯಕ್ತಿಗೆ ಸುಮಾರು 10 ಮಂದಿಯ ತಂಡ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ತಾಲೂಕು, ಹಿರೆಬಂಡಾರಿ ಗ್ರಾಮದ ಕರೆಂಕಿ ಮನೆ ನಿವಾಸಿ ಮಂಚ ಮುಗೇರ ಎಂಬವರ ಪುತ್ರ ಸುರೇಶ ಕೆ (33) ಎಂಬವರೇ ಹಲ್ಲೆ ಹಾಗೂ ಜೀವಬೆದರಿಕೆಗೊಳಗಾದ ವ್ಯಕ್ತಿ. ಆರೋಪಿಗಳನ್ನು ಶೇಖರ ಪೂಜಾರಿ, ಮನೋಜ್, ಉಮೇಶ, ಪ್ರಮೋದ್, ಅಶೋಕ, ಸುರೇಶ, ಉಮೇಶ, ರತ್ನಾಕರ, ಕೃಷ್ಣಪ್ಪ ಹಾಗೂ ಪ್ರದೀಪ ಎಂದು ಹೆಸರಿಸಲಾಗಿದೆ.
ಹಲ್ಲೆಗೊಳಗಾದ ಸುರೇಶ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕೋಡಿಂಬಾಡಿ ಪಂಚಾಯತ್ ಕಛೇರಿಯ ಬಳಿ ನಿವಾಸಿ, ಮೋಹನ ಎಂಬವರ ಮನೆಯಲ್ಲಿ ಸುಮಾರು ಎರಡು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ಸಮಯ ಕೂಡಾ ಮೋಹನರವರ ಮನೆಯಲ್ಲಿಯೇ ಉಳಕೊಂಡು ವಾರಕ್ಕೊಮ್ಮೆ ತನ್ನ ಮನೆಗೆ ಹೋಗುತ್ತಿದ್ದರು. ನವೆಂಬರ್ 9 ರಂದು ಬೆಳಿಗ್ಗೆ ಸುರೇಶ ಅವರು ಮೋಹನರವರ ಇನ್ನೊಂದು ಕೃಷಿ ಜಾಗವಾದ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕರ್ಪಾಡಿ ಎಂಬಲ್ಲಿಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ಸಾಯಂಕಾಲ ಮೋಹನರವರ ತಂದೆ ಅಣ್ಣಪ್ಪ ಗೌಡ ಮತ್ತು ತಾಯಿಯ ಜೊತೆ ಕೋಡಿಂಬಾಡಿಗೆ ಬಂದಾಗ ಮೋಹನರವರ ಮನೆಯಲ್ಲಿ ಅವರ ಮಗ ದಿಶ್ಯಾನ್ ಮಾತ್ರ ಇದ್ದು ಬೇರೆ ಯಾರೂ ಇರಲಿಲ್ಲ. ಬಳಿಕ ಮೋಹನರವರ ತಾಯಿ ಪುತ್ತೂರು ಪೇಟೆಗೆ ಹೋಗಿದ್ದು, ಮನೆಯಲ್ಲಿ ಮೋಹನರವರ ತಂದೆ ಮತ್ತು ಮಗ ಮಾತ್ರ ಇದ್ದರು. ಈ ಸಂದರ್ಭ ಸುರೇಶ ಹಳೆಯ ಮನೆ ಕಡೆಗೆ ಬಟ್ಟೆಗಳನ್ನು ತರಲು ಹೋದಾಗ ಹಳೆ ಮನೆಗೆ ಬೀಗ ಹಾಕಿದ್ದು, ನಂತರ ರಾತ್ರಿ ಸುಮಾರು 8.30 ಗಂಟೆಗೆ ಮೋಹನರವರ ಮನೆಯಿಂದ ತನ್ನ ಮನೆಗೆ ಹೊರಟಾಗ ಮನೆಯ ಅಂಗಳಕ್ಕೆ ಆರೋಪಿಗಳು ಸುರೇಶರವರನ್ನು ತಡೆದು ಬೆವಾರ್ಸಿ ರಂಡೆ ಮಗನೇ ಇಲ್ಲಿ ಏನು ನಿನಗೆ ಕೆಲಸ ಎಂದು ಬೈದು ಮೋಹನರವರ ಹಳೆಯ ಮನೆಗೆ ಕರೆದುಕೊಂಡು ಹೋಗಿ ಶೇಖರ ಪೂಜಾರಿಯು ಮರದ ದೊಣ್ಣೆಯಿಂದ ಹೊಡೆದಾಗ ಇತರರು ಕೈಗಳಿಂದ ಬೆನ್ನಿಗೆ, ಕೆನ್ನೆಗೆ, ಎದೆಗೆ ಕಾಲಿನಿಂದ ಸೊಂಟಕ್ಕೆ ತುಳಿದು ದೂಡಿ ಹಾಕಿರುತ್ತಾರೆ. ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಮೋಹನರವರ ತಂದೆ ಹಾಗೂ ಅವರ ಮಗ ಬರುವುದನ್ನು ನೋಡಿ, ಆರೋಪಿಗಳು ಸುರೇಶನನ್ನುದ್ದೇಶಿಸಿ ಬೇವಾರ್ಸಿ ಸೂಳೆ ಮಗನೇ ಕೇಸು ಕೊಡಲು ಹೋದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ.
ನಂತರ ಮೋಹನರವರು ವಿಷಯ ತಿಳಿದು ಹಲ್ಲೆಯಿಂದ ಗಾಯಗೊಂಡ ಸುರೇಶನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಸುರೇಶರವರು ಸುಮಾರು ಎರಡು ವರ್ಷಗಳಿಂದ ಮೋಹನರವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು ಈ ಬಗ್ಗೆ ಆರೋಪಿಗಳು ಹೊಟ್ಟೆ ಕಿಚ್ಚಿನಿಂದ ಈ ಕೃತ್ಯ ಎಸಗಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2022 ಕಲಂ 143, 147, 148, 341, 504, 324, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment