ಬಂಟ್ವಾಳ, ನವೆಂಬರ್ 18, 2022 (ಕರಾವಳಿ ಟೈಮ್ಸ್) : ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಮುಶಾವರ ಅಂಗವಾಗಿದ್ದ, ದಕ್ಷಿಣ ಕನ್ನಡ ಜಿಲ್ಲಾ ನಾಯಿಬ್ ಖಾಝಿಯಾಗಿದ್ದ ಮರ್‍ಹೂಂ ಶೈಖುನಾ ಮಿತ್ತಬೈಲು ಜಬ್ಬಾರ್ ಉಸ್ತಾದ್ ಅವರ 4ನೇ ವರ್ಷದ ಆಂಡ್ ನೇರ್ಚೆ ನವೆಂಬರ್ 26 ರಂದು ಶನಿವಾರ ಮಿತ್ತಬೈಲು ಉಸ್ತಾದರ ಮನೆ ಸಮೀಪದ ನಕ್ಷಬಂಧೀ ನಗರದಲ್ಲಿ ನಡೆಯಲಿದೆ.
ಸುಬ್‍ಹಿ ನಮಾಝ್ ಬಳಿಕ ಖತಮುಲ್ ಖುರ್-ಆನ್ ಹಾಗೂ ಕೂಟು ಝಿಯಾರತ್ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಮಾಲಪ್ಪಾಟ್, ಲುಹ್‍ರ್ ನಮಾಝ್ ಬಳಿಕ ಮೌಲಿದ್ ಮಜ್ಲಿಸ್ ಹಾಗೂ ಮಗ್ರಿಬ್ ನಮಾಝ್ ಬಳಿಕ ಶಮೀರ್ ದಾರಿಮಿ ಕೊಲ್ಲಂ ಅವರಿಂದ ಮುಖ್ಯ ಭಾಷಣ ನಡೆಯಲಿದೆ ಎಂದು ಶೈಖುನಾ ಜಬ್ಬಾರ್ ಉಸ್ತಾದ್ ಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment