ಮಂಗಳೂರು, ನವೆಂಬರ್ 01, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಳ್ಳಾಲ ತಾಲೂಕು ಘಟಕದ ವತಿಯಿಂದ ಮುಡಿಪು ಜನಶಿಕ್ಷಣ ಟ್ರಸ್ಟ್ ಸಹಭಾಗಿತ್ವದಲ್ಲಿ ಮನೆಯಂಗಳದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮಂಗಳವಾರ ಬಾಳೆಪುಣಿ ಗ್ರಾಮದ ನವಗ್ರಾಮ ಇಸ್ಮಾಯಿಲ್ ಕಣಂತೂರು ಅವರ ಮನೆಯಂಗಳದಲ್ಲಿ ಆಚರಿಸಲಾಯಿತು.
ಜನಪದ ವಿದ್ವಾಂಸ ಚಂದ್ರಹಾಸ ಕಣಂತೂರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಮಾಜಿ ಒಂಬಡ್ಸ್ ಮೆನ್ ಶೀನ ಶೆಟ್ಟಿ ಮನೆಯಂಗಳದಲ್ಲಿ ರಾಜ್ಯೋತ್ಸವ ಎಂಬ ಪರಿಷತ್ತಿನ ಆಶಯ ಅರ್ಥಪೂರ್ಣವಾಗಿದೆ ಎಂದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣಮೂಲ್ಯ, ಸ್ಥಳೀಯ ಪಂಚಾಯತ್ ಸದಸ್ಯೆಯರಾದ ಶಮೀಮಾ, ಝೊಹರಾ, ಚಿತ್ರಕಲಾ ಶಿಕ್ಷಕ ಸುಧೀರ್ ಬಾಳೆಪುಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾವು, ಪ್ರಮುಖರಾದ ಅಬೂಬಕ್ಕರ್ ಜಲ್ಲಿ, ಚೇತನ್ ಮೊದಲಾದವರು ಭಾಗವಹಿಸಿದ್ದರು. ಚಂದ್ರಶೇಖರ ಪಾತೂರು ಸ್ವಾಗತಿಸಿ, ವಂದಿಸಿದರು.
0 comments:
Post a Comment