ಮಂಗಳೂರು, ನವೆಂಬರ್ 30, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪದಾಧಿಕಾರಿಗಳ ಮತ್ತು ಬ್ಲಾಕ್ ಅಧ್ಯಕ್ಷರುಗಳ ಮಾಸಿಕ ಸಭೆಯು ಇಂದು ಡಿಸಿಸಿ ಆಫೀಸ್ ಮಂಗಳೂರು ಇಲ್ಲಿ ನಡೆಯಿತು.
ಪಕ್ಷ ಸಂಘಟನೆ ಮತ್ತು ಸಮಾಜದಲ್ಲಿ ವಾಸಿಸುವ ದುರ್ಬಲ ವರ್ಗ ಅಸಂಘಟಿತ ಕಾರ್ಮಿಕ ವರ್ಗಕ್ಕೆ ನಾವು ಮಾಡಬೇಕಾದ ಮತ್ತು ಮಾಡಬಹುದಾದ ಯೋಜನೆ ಮತ್ತು ಕೆಲಸಗಳನ್ನು ಈ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭ ಮಾತನಾಡಿದ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸಮಾಜದಲ್ಲಿ ದುರ್ಬಲ ವರ್ಗ ಮತ್ತು ಕೂಲಿ ಕಾರ್ಮಿಕ ಬೀದಿ ಬದಿ ವ್ಯಾಪಾರಿಗಳು ಇವರೆಲ್ಲರ ಕಷ್ಟಕ್ಕೆ ಸ್ಪಂದಿಸಿದರೆ ಮುಂದಿನ ದಿನಗಳಲ್ಲಿ ಅದು ನಮ್ಮ ಪಕ್ಷಕ್ಕೆ ಬಲ ತುಂಬುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ನಿರಂಜನ್ ರೈ ಮಾತನಾಡಿ, ಅಸಂಘಟಿತ ಕಾರ್ಮಿಕರು ಯಾರು ಎಂಬ ಪಟ್ಟಿಯನ್ನು ಸಭೆಯ ಮುಂದಿಟ್ಟರು.
ಇದೇ ವೇಳೆ ವಿವಿಧ ಬ್ಲಾಕ್ ಅಧ್ಯಕ್ಷರುಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಬ್ಲಾಕ್ ಪದಾಧಿಕಾರಿಗಳು ಸಂವಾದ ಮತ್ತು ಚರ್ಚೆಯನ್ನು ನಡೆಸಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಬಗ್ಗೆ ಈ ಮುಂಚೂಣಿ ಘಟಕದಿಂದ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಚಂದ್ರಲಿಂಗಂ ಸುಳ್ಯ, ಮುರಳಿಧರ್ ಮುಡಿಪು, ರೋಷನ್ ರೈ, ಪ್ರಶಾಂತ್ ಬಜಾಲ್, ಸಿರಾಜ್, ಆನಂದ್ ಸುರತ್ಕಲ್, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕ ಹರ್ಷದ್ ಕುಕ್ಕಿಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್, ಇಸ್ಮಾಯಿಲ್ ನಾಟೆಕಲ್, ಯೋಗೀಶ್ ನಾಯಕ್, ಇಸ್ಮಾಯಿಲ್ ಮೋರ್ಲಾ, ನಿಯಾಝ್ ಫಜೀರ್, ಜ್ಞಾನಶೀಲ, ಐಬಾರ್ಟ್ ಸಲ್ದಾನ, ಪದಾಧಿಕಾರಿಗಳಾದ ಲಕ್ಷ್ಮಣ್ ಶೆಟ್ಟಿ, ಭರತ್ ರಾಜ್, ರಶೀದ್, ಹನೀಫ್, ಇನಾಸ್, ರವೀಂದ್ರ, ಜಯಪ್ರಕಾಶ್, ಕರೀಂ, ಸುರೇಶ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment