ನವದೆಹಲಿ, ನವೆಂಬರ್ 21, 2022 (ಕರಾವಳಿ ಟೈಮ್ಸ್) : 2023 ರ ಮಾರ್ಚ್ ತಿಂಗಳ 31ರೊಳಗೆ ಪ್ಯಾನ್ ಕಾರ್ಡನ್ನು ಆಧಾರ್ ಜೊತೆಗೆ ಜೋಡಿಸದೇ ಇದ್ದಲ್ಲಿ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಪ್ಯಾನ್ ಕಾರ್ಡ್ ಆಧಾರ್ ಜೊತೆಗೆ ಜೋಡಣೆಯಾಗದೇ ಇದ್ದಲ್ಲಿ, ಪ್ಯಾನ್ ನಿಷ್ಕ್ರಿಯಗೊಳ್ಳುವುದರ ಜೊತೆಗೆ 1 ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಲಾಗುತ್ತದೆ. ಈ ಹಿಂದೆ ದಂಡದ ಮೊತ್ತ 500 ರೂಪಾಯಿಗಳಷ್ಟಿತ್ತು.
ಒಂದು ವೇಳೆ ಪ್ಯಾನ್ ಕಾರ್ಡ್ ಮಾನ್ಯವಾಗಿದ್ದರೂ ಆಧಾರ್ ಜೊತೆಗೆ ಜೋಡಿಸದೇ ಇದ್ದಲ್ಲಿ ಅದು ಅಮಾನ್ಯವಾಗಲಿದೆ. ಷೇರುಗಳಲ್ಲಿನ ಹೂಡಿಕೆ, ಮ್ಯೂಚುಯಲ್ ಫಂಡ್ಸ್, ಸಾಲ ಮತ್ತಿತರ ಪ್ರಕ್ರಿಯೆಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
0 comments:
Post a Comment