ನವದೆಹಲಿ, ನವೆಂಬರ್, 12, 2022 (ಕರಾವಳಿ ಟೈಮ್ಸ್) : ಕಳೆದ ದಶಕದಲ್ಲಿ, ಆಧಾರ್ ಸಂಖ್ಯೆಯು ಭಾರತದಲ್ಲಿನ ನಿವಾಸಿಗಳ ಗುರುತಿನ ಪುರಾವೆಯಾಗಿ ಹೊರಹೊಮ್ಮಿದೆ. ಹಲವಾರು ಸರಕಾರಿ ಯೋಜನೆಗಳು ಮತ್ತು ಸೇವೆಗಳನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿದೆ.
10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಪಡೆದ ನಿವಾಸಿಗಳು ಮತ್ತು ಈವರೆಗೆ ಎಂದಿಗೂ ನವೀಕರಿಸದಿರುವವರು, ಅಂತಹ ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ದಾಖಲೆಗಳನ್ನು ನವೀಕರಿಸಲು ಪೆÇ್ರೀತ್ಸಾಹಿಸಲಾಗುತ್ತದೆ.
ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಗುರುವಾರ ಕೆಲವು ಸುದ್ದಿ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಈ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೆÇೀಸ್ಟ್‍ಗಳನ್ನು ನಿರ್ಲಕ್ಷಿಸುವಂತೆ ತಿಳಿಸಲಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈ ಹಿಂದೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಇದು ನಿವಾಸಿಗಳಿಗೆ ತಮ್ಮ ದಾಖಲೆಗಳನ್ನು ನವೀಕರಿಸಲು ಒತ್ತಾಯಿಸುತ್ತಿದೆ ಮತ್ತು ಪೆÇ್ರೀತ್ಸಾಹಿಸುತ್ತಿದೆ. ಇತ್ತೀಚೆಗೆ ಹೊರಡಿಸಲಾದ ಗೆಜೆಟ್ ಅಧಿಸೂಚನೆಯು ನಿವಾಸಿಗಳು ಪ್ರತಿ 10 ವರ್ಷಗಳಿಗೊಮ್ಮೆ ಮಾಡಬಹುದು ಎಂದು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.
ಆಧಾರ್‍ನಲ್ಲಿ ಡಾಕ್ಯುಮೆಂಟ್‍ಗಳನ್ನು ಅಪ್‍ಡೇಟ್ ಮಾಡುವುದರಿಂದ ಜೀವನ ನಿರ್ವಹಣೆಗೆ, ಉತ್ತಮ ಸೇವೆಯ ವಿತರಣೆಗೆ ಸಹಾಯ ಮಾಡುತ್ತದೆ ಮತ್ತು ನಿಖರವಾದ ದೃಢೀಕರಣವನ್ನು ಸಕ್ರಿಯಗೊಳಿಸುತ್ತದೆ. ಯುಐಡಿಎಐ ಯಾವಾಗಲೂ ತಮ್ಮ ದಾಖಲೆಗಳನ್ನು ನವೀಕರಿಸಲು ನಿವಾಸಿಗಳನ್ನು ಪೆÇ್ರೀತ್ಸಾಹಿಸುತ್ತದೆ ಮತ್ತು ಗೆಜೆಟ್ ಅಧಿಸೂಚನೆಯು ಆ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದು ಕೇಂದ್ರ ಸರಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
0 comments:
Post a Comment