ಬಂಟ್ವಾಳ, ನವೆಂಬರ್ 02, 2022 (ಕರಾವಳಿ ಟೈಮ್ಸ್) : ಈ ಬಾರಿಯ ಕನ್ನಡ ರಾಜ್ಯೋತ್ಸವದಂದು ಬಂಟ್ವಾಳ ತಾಲೂಕಿನ 5 ಮಂದಿ ಸಾಧಕರು ಹಾಗೂ ಒಂದು ಸೇವಾ ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಮಾಜ ಸೇವಕ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಬಡಜನರ ಪಾಲಿನ ಎರ್ಮಾಲ ಡಾಕ್ಟರ್ ಎಂದೇ ಹೆಸರು ವಾಸಿಯಾದ ಡಾ ಭಾಸ್ಕರ್ ರಾವ್, ಹಿರಿಯ ಪರ್ತಕರ್ತ ವೆಂಕಟೇಶ ಬಂಟ್ವಾಳ, ಯಕ್ಷಗಾನ ಕ್ಷೇತ್ರದ ಖ್ಯಾತ ಹಾಸ್ಯ ಕಲಾವಿದ ಜಯರಾಮ ಆಚಾರ್ಯ, ದೈವ ನರ್ತಕ ವೆಂಕಪ್ಪ ನಲಿಕೆ ಅವರಿಗೆ ವೈಯುಕ್ತಿಕವಾಗಿ ಪ್ರಶಸ್ತಿ ದೊರೆತದೆ, ಸಜಿಪ ಶಾರದ ಫ್ರೆಂಡ್ಸ್ ಸರ್ಕಲ್ ವಿದ್ಯಾನಗರ ಸಜೀಪಮುನ್ನೂರು ಸಂಘಟನೆಯ ಸಮಾಜ ಸೇವಾ ಚಟುವಟಿಕೆಗಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಬಂಟ್ವಾಳ ತಾಲೂಕಿನ ಐದೂ ಮಂದಿ ವ್ಯಕ್ತಿಗಳು ಕೂಡಾ ಯಾವುದೇ ಅರ್ಜಿ ಹಾಕದೆ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
0 comments:
Post a Comment