ಬಂಟ್ವಾಳ, ಅಕ್ಟೋಬರ್ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಸುರಿಬೈಲು ನಿವಾಸಿ, ಸುರಿಬೈಲು ಜುಮಾ ಮಸೀದಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್ ಎಂ ಅಬೂಬಕ್ಕರ್ (60) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ಕೊಳ್ನಾಡು ಗ್ರಾಮದ ಸುರಿಬೈಲು ಪ್ರೌಢಶಾಲಾ ಮಾಜಿ ಕಾರ್ಯಾಧ್ಯಕ್ಷರಾಗಿರುವ ಇವರು ಶಾಲಾ ವಿದ್ಯಾರ್ಥಿಗಳನ್ನು ಶಿಕ್ಷಣದ ಜೊತೆ ಪರಿಸರಕ್ಕೆ ಪೂರಕವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿ ಶಾಲೆಯನ್ನು ರಾಜ್ಯ ಪ್ರಶಸ್ತಿಗೆ ಪಾತ್ರರಾಗಿಸುವಲ್ಲಿ ಕಾರಣರಾಗಿದ್ದರು. ಶಾಲೆಯಲ್ಲಿ ಅಡಿಕೆ, ಬಾಳೆ ಸಹಿತ ತರಕಾರಿ ಕೃಷಿಗಳನ್ನು ಬೆಳೆಸಿ ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವಲ್ಲಿಯೂ ಇವರು ಯಶಸ್ವಿಯಾಗಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಕಕ್ಷ, ಕೊಳ್ನಾಡು ಗ್ರಾ ಪಂ ಮಾಜಿ ಸದಸ್ಯ ಸಹಿತ ಸಾಮಾಜಿಕ, ರಾಜಕೀಯ, ಧಾರ್ಮಿಕವಾಗಿ ಸಕ್ರಿಯರಾಗಿದ್ದರು.
0 comments:
Post a Comment