ಸುಳ್ಯ, ಅಕ್ಟೋಬರ್ 30, 2022 (ಕರಾವಳಿ ಟೈಮ್ಸ್) : ಹೆಣ್ಣು ಮಗು ಬಯಸಿದ್ದ ಯುವತಿ ಹೆತ್ತದ್ದು ಗಂಡು ಮಗು ಎಂದು 11 ದಿನದ ಗಂಡು ಮಗುವನ್ನು ಮನೆಯ ಬಾವಿಗೆ ಎಸೆದು ಕೊಂದ ಹೃದಯ ವಿದ್ರಾವಕ ಘಟನೆ ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಬಸ್ತಿಕಾಡು ಮನೆ ಎಂಬಲ್ಲಿ ಶನಿವಾರ ನಡೆದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಾಣಂತಿಯ ವಿರುದ್ದ ಆಕೆಯ ಅಣ್ಣನ ಪತ್ನಿ ರಂಜಿತಾ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಂಜಿತಾ ಅವರ ಗಂಡನ ತಂಗಿ ಪವಿತ್ರಾಳು ಸುಮಾರು 4 ವರ್ಷದ ಹಿಂದೆ ಬೆಂಗಳೂರು ಮೂಲದ ಹರೀಶ್ ಎಂಬವರನ್ನು ವಿವಾಹವಾಗಿ ನಂತರ ಅವರೊಳಗೆ ಅನ್ಯೋನತೆ ಇಲ್ಲದೇ ಇದ್ದುದರಿಂದ ಅವಳು ಆತನಿಗೆ ವಿಚ್ಚೇದನ ನೀಡಿ ಬಳಿಕ ತುಮಕೂರು ಜಿಲ್ಲೆ ಶಿರ ತಾಲೂಕಿನ ಮಣಿಕಂಠ ಎಂಬಾತನನ್ನು ಸುಮಾರು ಒಂದು ವರ್ಷದ ಹಿಂದೆ ವಿವಾಹ ಆಗಿರುತ್ತಾಳೆ. ಸುಮಾರು 2 ತಿಂಗಳು ಗಂಡನೊಂದಿಗೆ ಇದ್ದು, ನಂತರ ಆಕೆಗೆ ಆಸೌಖ್ಯ ಇದ್ದುದರಿಂದ ತಾಯಿ ಮನೆಗೆ ಬಂದಿರುತ್ತಾಳೆ. ಗರ್ಭವತಿಯಾಗಿದ್ದ ವೇಳೆ ಪವಿತ್ರಾಳು ನನಗೆ ಹೆಣ್ಣು ಮಗುವೆಂದರೆ ತುಂಬಾ ಇಷ್ಟ, ಗಂಡು ಮಕ್ಕಳು ಸರಿಯಾಗಿ ತಂದೆ ತಾಯಿಯನ್ನು ನೋಡಿಕೊಳ್ಳುವುದಿಲ್ಲ, ನನಗೆ ಹೆಣ್ಣು ಮಗುವೇ ಆಗುತ್ತದೆ ಎಂದು ಹೇಳುತ್ತಿದ್ದು, ಪವಿತ್ರಾಳಿಗೆ ಆರೋಗ್ಯದಲ್ಲಿ ಆಗಾಗ ಎರುಪೇರು ಆಗುತ್ತಿರುವುದರಿಂದ ಅವಳನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ತಿಂಗಳ ಹಿಂದೆ ದಾಖಲಿಸಲಾಗಿತ್ತು. ಅ 19 ರಂದು ಪವಿತ್ರಾಳು ಗಂಡು ಮಗುವಿಗೆ ಜನ್ಮ ನೀಡಿದ್ದು, ಆಕೆ ಮಗುವಿಗೆ ಸರಿಯಾಗಿ ಮೊಲೆ ಹಾಲು ನೀಡದೇ ಒತ್ತಾಯಕ್ಕೆ ನೀಡುತ್ತಿದ್ದಳು. ಶನಿವಾರ (ಅ 29) ರಂದು ಬೆಳಿಗ್ಗೆ ಪವಿತ್ರಾಳು ಈ ಗಂಡು ಮಗು ನನಗೆ ಇಷ್ಟವಿಲ್ಲದಿದ್ದರು ಹುಟ್ಟಿರುತ್ತದೆ. ಈ ಗಂಡು ಮಗು ನನಗೆ ಬೇಡ ಎಂದು ಹೇಳಿದ್ದು, ಮನೆಯ ಕೋಣೆಯೊಳಗೆ ಮಲಗಿದ್ದಳು. ಅಪರಾಹ್ನ ಸುಮಾರು 3-15 ರ ವೇಳೆಗೆ ಪವಿತ್ರಾ ಮಗುವನ್ನು ಎತ್ತಿಕೊಂಡು ಹೊರಗೆ ಬಂದಾಗ ರಂಜಿತಾ ಅಂಗಳದಲ್ಲಿ ನಿಂತು ನೋಡಿಕೊಂದ್ದ ಸಂದರ್ಭ ಅವಳು ನನಗೆ ಇಷ್ಟವಿಲ್ಲದ ಈ ಮಗು ಬೇಡ ಇದನ್ನು ಕೊಲ್ಲುತ್ತೇನೆ ಎಂದು ಹೇಳಿ ಮನೆಯ ಎದುರಿನ ಬಾವಿಗೆ ಎಸೆದಿರುತ್ತಾಳೆ. ನಂತರ ಆಕೆ ರೂಮಿನ ಒಳಗಡೆ ಓಡಿ ಹೋಗಿದ್ದಾಳೆ.
ಘಟನೆಯನ್ನು ಕಣ್ಣಾರೆ ಕಂಡ ರಂಜಿತಾ ತಕ್ಷಣ ಗಂಡನಿಗೆ ದೂರವಾಣಿ ಕರೆ ಮಾಡಿ ತಿಳಿಸಿದ ಪ್ರಕಾರ ಗಂಡ ಅರುಣ್ ಕುಮಾರ್ ಹಾಗೂ ಅವರ ಸ್ನೇಹಿತರಾದ ಪ್ರಕಾಶ್, ಚೇತನ್ ಹಾಗೂ ಇತರರೊಂದಿಗೆ ಸ್ಥಳಕ್ಕೆ ಬಂದಿರುತ್ತಾರೆ. ಈ ಪೈಕಿ ಪ್ರಕಾಶನು ಬಾವಿಗೆ ಇಳಿದು, ಮಗುವನ್ನು ತೆಗೆದು ಮೇಲಕ್ಕೆ ಎತ್ತಿ ತಂದು ಕಾರಿನಲ್ಲಿ ಪಂಜ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅದಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪವಿತ್ರಾಳು ಗರ್ಬಿಣಿ ಆದಾಗ ಅವಳಿಗೆ ಹೆಣ್ಣು ಮಗು ಆಗ ಬೇಕೆಂಬ ಆಸೆ ಇದ್ದು, ಅವಳ ಇಷ್ಟ ನೇರವೆರದೇ ಇದ್ದುದರಿಂದ ಹುಟ್ಟಿದ ಗಂಡು ಮಗುವನ್ನು ಆಕೆಯು ಬಾವಿಗೆ ಎಸೆದು ಕೊಲೆ ಮಾಡಿರುವುದಾಗಿದೆ. ಮಗುವನ್ನು ಉದ್ದೇಶ ಪೂರ್ವಕ ಕೊಲೆ ಮಾಡಿರುವ ಪವಿತ್ರಾಳ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2022 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment