ಆಝಾನ್ ಆಕ್ಷೇಪದ ಬಳಿಕ ರಾಜ್ಯದಲ್ಲಿ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಸರಕಾರದಿಂದ ಅನುಮತಿ - Karavali Times ಆಝಾನ್ ಆಕ್ಷೇಪದ ಬಳಿಕ ರಾಜ್ಯದಲ್ಲಿ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಸರಕಾರದಿಂದ ಅನುಮತಿ - Karavali Times

728x90

22 October 2022

ಆಝಾನ್ ಆಕ್ಷೇಪದ ಬಳಿಕ ರಾಜ್ಯದಲ್ಲಿ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಸರಕಾರದಿಂದ ಅನುಮತಿ

ಬೆಂಗಳೂರು, ಅಕ್ಟೋಬರ್ 22, 2022 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಮಸೀದಿಗಳಲ್ಲಿ ಆಝಾನ್ ಕರೆಗೆ ಲೌಡ್ ಸ್ಪೀಕರ್ ಬಳಕೆಗೆ ಆಕ್ಷೇಪ ಕೇಳಿ ಬಂದ ಬಳಿಕ ಬ್ರೇಕ್ ಹಾಕಲಾಗಿದ್ದ ಲೌಡ್ ಸ್ಪೀಕರ್ ಬಳಕೆಗೆ ಇದೀಗ ರಾಜ್ಯ ಸರಕಾರ ಪರವಾನಿಗೆ ನೀಡಿ 10,889 ಮಸೀದಿಗಳಲ್ಲಿ ಆಝಾನ್ ಕರೆಗೆ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ನೀಡಿದೆ. 

ಆಝಾನ್ ವಿರುದ್ಧ ಆಕ್ಷೇಪ ವ್ಯಕ್ತವಾದ ಬಳಿಕ ರಾಜ್ಯ ಸರಕಾರ ಲೌಡ್ ಸ್ಪೀಕರ್‍ಗೆ ಬ್ರೇಕ್ ಹಾಕಲು ಮುಂದಾಗಿತ್ತು. ಪರವಾನಗಿ ಇಲ್ಲದೇ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿತ್ತು. ಆ ಬಳಿಕ ಪರವಾನಿಗೆ ಪಡೆಯಲು ಮಸೀದಿ, ದೇವಾಲಯ, ಚರ್ಚ್‍ಗಳಿಗೆ ಅರ್ಜಿ ಸಲ್ಲಿಸಲು ಸರಕಾರ ಅವಕಾಶ ಕಲ್ಪಿಸಿತ್ತು. ಪರವಾನಗಿ ನೀಡುವ ಅಧಿಕಾರವನ್ನು ಸರಕಾರ ಪೊಲೀಸ್ ಅಧಿಕಾರಿಗಳಿಗೆ ನೀಡಿತ್ತು. 

ಈ ಹಿನ್ನೆಲೆಯಲ್ಲಿ ಮಂದಿರ, ಮಸೀದಿ, ಚರ್ಚ್‍ಗಳಿಂದ 17 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ರಾಜ್ಯಾದ್ಯಂತ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿ ಇದೀಗ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 

17 ಸಾವಿರದ 850 ಅರ್ಜಿಗಳ ಪೈಕಿ 10 ಸಾವಿರ ಅರ್ಜಿಗಳಿಗೆ ಸರಕಾರ ಎರಡು ವರ್ಷಗಳ ಅವಧಿಗೆ ಅನುಮತಿ ನೀಡಿ ಆದೇಶ ಮಾಡಿದೆ. 450 ರೂಪಾಯಿ ಶುಲ್ಕ ಪಡೆದು ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಪಡೆಯಲಾಗಿತ್ತು. ಈ ಪೈಕಿ ಬೆಂಗಳೂರಿನಲ್ಲಿ 1,841 ಮಸೀದಿಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಹಿಂದೂ ದೇವಾಲಯ, 1,400ಕ್ಕೂ ಹೆಚ್ಚು ಚರ್ಚ್‍ಗಳಿಗೆ ಸರಕಾರ ಅನುಮತಿ ನೀಡಿದೆ

17 ಸಾವಿರದ 850 ಅರ್ಜಿಗಳನ್ನು ಪರಿಶೀಲಿಸಿ ಸದ್ಯ 10 ಸಾವಿರ ಅರ್ಜಿದಾರರಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿರುವ ರಾಜ್ಯ ಸರಕಾರ ಲೌಡ್ ಸ್ಪೀಕರ್ ಬಳಸಲು ಕೆಲವೊಂದು ನಿಯಮಗಳನ್ನು ಕೂಡಾ ವಿಧಿಸಿದೆ. 

ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಲೌಡ್ ಸ್ಪೀಕರ್ ಬಳಸಬೇಕು. ನಿಯಮಿತ ಡೆಸಿಬಲ್ ಮಾತ್ರ ಬಳಸಬೇಕು. ಡೆಸಿಬಲ್ ನಿಯಂತ್ರಿಸೋ ಉಪಕರಣ ಅಳವಡಿಕೆ ಕಡ್ಡಾಯ. ಜನ ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಅನುಗುಣವಾಗಿ ಡೆಸಿಬಲ್ ಅಳವಡಿಕೆ, ಮಸೀದಿ-ಮಂದಿರದ ಆವರಣದ ಒಳಗೆ ಲೌಡ್ ಸ್ಪೀಕರ್‍ಗಳು ಇರಬೇಕು. ಪೆÇಲೀಸರು ಸೂಚಿಸಿರುವಷ್ಟು ಮಾತ್ರ ಲೌಡ್ ಸ್ಪೀಕರ್ ಬಳಸಬೇಕು ಎಂಬ ನಿಯಮ ವಿಧಿಸಿ ಇದೀಗ ಸರಕಾರ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ನೀಡಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಆಝಾನ್ ಆಕ್ಷೇಪದ ಬಳಿಕ ರಾಜ್ಯದಲ್ಲಿ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಸರಕಾರದಿಂದ ಅನುಮತಿ Rating: 5 Reviewed By: karavali Times
Scroll to Top