ಬಂಟ್ವಾಳ, ಅಕ್ಟೋಬರ್ 13, 2022 (ಕರಾವಳಿ ಟೈಮ್ಸ್) : ದಸರಾ ರಜೆ ಕಳೆದು ಇನ್ನೇನು ಮುಂದಿನ ಸೋಮವಾರ ಶಾಲಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಎಸ್ ಎಲ್ ಎನ್ ಪಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಠಾರದಲ್ಲಿ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಸೂಚನೆಯಂತೆ ಪುರಸಭಾ ವತಿಯಿಂದ ಇಲ್ಲಿನ ಪೌರ ಕಾರ್ಮಿಕರು ಗುರುವಾರ ಸ್ವಚ್ಛತಾ ಕಾರ್ಯ ಕೈಗೊಂಡರು.
ಪುರಸಭಾ ಸದಸ್ಯ ಸಿದ್ದೀಕ್ ಅವರ ಸ್ವ ಇಚ್ಛೆಯಂತೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಈ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ಶಾಲಾ ವಠಾರದ ರಸ್ತೆ ಬದಿಯ ಕಳೆ ಗಿಡಗಳನ್ನು ಕತ್ತರಿಸಿ ಕಸ-ಕಡ್ಡಿಗಳನ್ನು ವಿಲೇವಾರಿ ಮಾಡಲಾಗಿದೆ. ಮಳೆಗಾಲವೂ ಕೊಂಚ ದೂರವಾಗಿದ್ದು, ಪರಿಸರದ ಕಳೆಗಿಡಗಳನ್ನು ಕತ್ತರಿಸಿ ಸ್ವಚ್ಛವಾಗಿಟ್ಟರೆ ಮುಂದಿನ ದಿನಗಳಲ್ಲಿ ಪರಿಸರ ಚೊಕ್ಕವಾಗಿರುವ ಹಿನ್ನಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ವಠಾರದಲ್ಲಿ ಈ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಕೌನ್ಸಿಲರ್ ಸಿದ್ದೀಕ್ ಗುಡ್ಡೆಅಂಗಡಿ ಪ್ರತಿಕ್ರಯಿಸಿದ್ದಾರೆ.
0 comments:
Post a Comment